VIDEO | ಈ ವಿಡಿಯೋ ನೋಡಿ, ಸೊಳ್ಳೆ ಮೇಲೂ ಕರುಣೆ ಉಕ್ಕಿ ಬರುತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ವಿಡಿಯೋಗಳು ವೈರಲ್ ಆಗುತ್ತವೆ, ಸಣ್ಣ ಸಣ್ಣ ವಿಷಯಗಳ ಮೇಲೂ ಬೆಳಕು ಚೆಲ್ಲಲಾಗುತ್ತದೆ. ಕೆಲವು ನಗು ತರಿಸಿದ್ರೆ, ಕೆಲವು ಅಸಹ್ಯ ಎನಿಸುತ್ತವೆ. ಇನ್ನೂ ಕೆಲವು ಮುಖದ ಮೇಲೊಂದು ಆಶ್ಚರ್ಯಸೂಚಕ ಚಿಹ್ನೆ ಉಳಿಸಿಬಿಡುತ್ತವೆ.

ಇಂಥದ್ದೇ ಒಂದು ವಿಡಿಯೋ ಇಲ್ಲಿದೆ ನೋಡಿ, ಇದನ್ನು ನೋಡಿದ್ರೆ ಸೊಳ್ಳೆ ಮೇಲೂ ಅಯ್ಯೋ ಪಾಪ ಅಂತೀರಿ. ಒಂದು ಸೊಳ್ಳೆ ಮನುಷ್ಯನ ರಕ್ತ ಹೀರೋಕೆ ಬಂದಿದೆ, ಆದ್ರೆ ಅದಕ್ಕೆ ದೊಡ್ಡ ಅಡ್ಡಿಯಾಗಿದೆ. ಆ ಅಡ್ಡಿ ಏನು ಗೊತ್ತಾ? ಆ ಮನುಷ್ಯನ ಕೂದಲು! ಹೌದು, ಮೈಮೇಲಿರುವ ರೋಮಗಳನ್ನು ದಾಟಿ ಚರ್ಮ ಮುಟ್ಟೋದಕ್ಕೆ ಸೊಳ್ಳೆ ಸಾಕಷ್ಟು ಕಷ್ಟಪಡುತ್ತದೆ. ಅರ್ಧ ಒಳಗೆ ಬಂದು ಚಕ್ರವ್ಯೂಹದಲ್ಲಿ ಸಿಲುಕಿಕೊಂಡಂತೆ ಒದ್ದಾಡುತ್ತದೆ. ನಾವಿನ್ನೂ ಎಷ್ಟೂ ಅಂತ ಹೇಳೋಣ? ನೀವೆ ಒಮ್ಮೆ ಈ ವಿಡಿಯೋ ನೋಡಿಬಿಡಿ!

https://twitter.com/TheFigen_/status/1666431839781675010?s=20

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!