ಮತ್ತೊಮ್ಮೆ ಕ್ಷಿಪಣಿ ಹಾರಿಸಿ ಕಿಮ್‌ ಉದ್ಧಟತನ: ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಪಾನ್‌ ಪಿಎಂ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ಬೆಳಗ್ಗೆ ಜಪಾನ್ ಸಮುದ್ರದ ಕಡೆಗೆ ಉತ್ತರ ಕೊರಿಯಾ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸುತ್ತಿದ್ದಂತೆ, ಈ ನಿರ್ಣಾಯಕ ಸಮಯದಲ್ಲಿ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಜಪಾನ್‌ ಪ್ರಧಾನ ಮಂತ್ರಿ ಸೂಚನೆ ನೀಡಿದೆ. ಉತ್ತರ ಕೊರಿಯಾದ ಕ್ಷಿಪಣಿ ಹೊಕ್ಕೈಡೋ ಪ್ರಾಂತ್ಯ ಅಥವಾ ನೆರೆಯ ಜಲಮಾರ್ಗದಲ್ಲಿ ಬಿದ್ದಿರಬಹುದು ಎಂದು ಜಪಾನ್ ಎಚ್ಚರಿಕೆ ನೀಡಿದೆ.

ಜಪಾನ್ ಪಿಎಂಒ ಈ ಬಗ್ಗೆ ಟ್ವೀಟ್‌ ಮಾಡಿದ್ದು, ” ಸಾರ್ವಜನಿಕರಿಗೆ ತ್ವರಿತ ಮತ್ತು ಸಮರ್ಪಕ ಮಾಹಿತಿಯನ್ನು ಒದಗಿಸಲು ಗರಿಷ್ಠ ಪ್ರಯತ್ನವನ್ನು ಮೀಸಲಿಡಿ ಮತ್ತು ವಿಮಾನ, ಹಡಗುಗಳು ಮತ್ತು ಇತರ ಸ್ವತ್ತುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಿ” ಎಂದು ಸೂಚಿಸಿದೆ.

ಕ್ಷಿಪಣಿಯು ಜಪಾನ್‌ನ ಜಲಪ್ರದೇಶದಲ್ಲಿ ಬಂದಿಳಿದಿರುವ ಸಾಧ್ಯತೆಯಿರುವುದರಿಂದ, ಸನ್ನದ್ಧತೆ ಸೇರಿದಂತೆ ಮುನ್ನೆಚ್ಚರಿಕೆಗಾಗಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ಕಾರ್ಯಾಲಯವು ಒತ್ತಾಯಿಸಿದೆ.

NHK ವರ್ಲ್ಡ್ ಪ್ರಕಾರ, ಉತ್ತರ ಕೊರಿಯಾದ ಕ್ಷಿಪಣಿಯು ಸಮೀಪದಲ್ಲಿ ಅಥವಾ ಹೊಕ್ಕೈಡೋ ಪ್ರಿಫೆಕ್ಚರ್‌ನಲ್ಲಿ ಇಳಿದಿರಬಹುದು ಎಂದು ಜಪಾನ್ ಎಚ್ಚರಿಕೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!