Saturday, October 1, 2022

Latest Posts

ಕಂದಾಯ ಸಚಿವರ ಗ್ರಾಮ ವಾಸ್ತವ್ಯ: ದಲಿತರ ಮನೆಯಲ್ಲಿ ಉ.ಕ.ವಿಶೇಷ ಊಟ ಸವಿದ ಅಶೋಕ್

ಹೊಸದಿಗಂತ ವರದಿ ಕಲಬುರಗಿ: 

ಕಂದಾಯ ಸಚಿವ ಆರ್.ಅಶೋಕ್ ಸೇಡಂ ತಾಲೂಕಿನ ಆಡಕಿ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ, ಭಾನುವಾರ ಬೆಳಿಗ್ಗೆ ದಲಿತರ ಮನೆಯಲ್ಲಿ ಉತ್ತರ ಕರ್ನಾಟಕದ ವಿಶೇಷ ಊಟ ಸವಿದರು. ದಶರಥ ರಾಠೋಡ, ವೀಮಲಾ ರಾಠೋಡ ಮನೆಯಲ್ಲಿ ಉತ್ತರ ಕರ್ನಾಟಕದ ವಿಶೇಷ ಜೋಳದ ರೊಟ್ಟಿ, ಫುಂಡಿ ಪಲ್ಯಾ, ಘಟಬ್ಯಾಳಿ, ಮೊಸರು, ಹಿಂಡಿ ಜೊತೆಗೆ ಸೌತೆಕಾಯಿ, ಗಜರಿಯನ್ನು ಸೇವಿಸಿದರು.

ಈ ಸಂದರ್ಭದಲ್ಲಿ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ, ಬಸವರಾಜ ಮತ್ತಿಮಡು,ಜಿಲ್ಲಾಧಿಕಾರಿ ಯಶವಂತ ಗುರುಕರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗ್ರಾಮದ ಅಭಿವೃದ್ಧಿಗೆ 1ಕೋಟಿ ಹಣ ಘೋಷಣೆ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!