ಮಾನವ ಹಕ್ಕುಗಳ ಉಲ್ಲಂಘನೆ ಹೆಸರಿನಲ್ಲಿ ಮಠದ ಶತಮಾನಗಳ ಆಚರಣೆಗೆ ನಿಷೇಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತಮಠದಲ್ಲಿ ಶತಮಾನಗಳಿಂದ ಆಚರಿಸಿಕೊಂಡು ಬರುತ್ತಿರುವ ಆಚರಣೆಯನ್ನು ನಿಷೇಧಿಸಿ ವಿಭಾಗೀಯ ಕಂದಾಯ ಅಧಿಕಾರಿ ಹೊರಡಿಸಿರುವ ಆದೇಶವು ತಮಿಳುನಾಡಿನ ಜನಾಕ್ರೋಶಕ್ಕೆ ಕಾರಣವಾಗಿದೆ.

ತಮಿಳುನಾಡಿನ ಮಧುರೈ ಜಿಲ್ಲೆಯ ಧರ್ಮಪುರಂ ಮಠದ “ಪಟ್ಟಿನ ಪ್ರವೇಶ” ವನ್ನು ನಿಷೇಧಿಸಿ ಆರ್‌ಡಿಒ ಜೆ.ಬಾಲಾಜಿ ಆದೇಶ ಹೊರಡಿಸಿದ್ದಾರೆ. “ಪಟ್ಟಿನ ಪ್ರವೇಶ”ವು ಕಳೆದ ಐದು ಶತಮಾನಗಳಿಂದ ಆಚರಣೆಯ ಮಾಡಲಾಗುತ್ತಿರುವ ಸಂಪ್ರದಾಯವಾಗಿದ್ದು ಪಲ್ಲಕ್ಕಿಯ ಮೇಲೆ ಮಠಾಧೀಶರನ್ನು ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ. ಈ ಪಲ್ಲಕ್ಕಿಯನ್ನು ಮಠದ ಅನುಯಾಯಿಗಳು, ಸ್ವಾಮಿಗಳ ಭಕ್ತರು ಹೊರುವುದು ವಾಡಿಕೆ. ಆದರೆ ಈ ಆಚರಣೆಯು ಮಾನವಹಕ್ಕುಗಳಿಗೆ ಧಕ್ಕೆ ತರುತ್ತದೆ ಎಂದು ಕಾರಣನೀಡಿ ಏಪ್ರಿಲ್‌ 27ರಂದು ಕಂದಾಯ ಅಧಿಕಾರಿ ಆದೇಶ ನೀಡಿದ್ದಾರೆ.

ಇದು ಮಠದ ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು ಶತಮಾನಗಳಷ್ಟು ಹಳೆಯದಾದ ಆಚರಣೆಯನ್ನು ನಿಷೇಧಿಸುವುದು ಸರಿಯಲ್ಲ ಆದೇಶವನ್ನು ವಾಪಸ್‌ ಪಡೆಯಬೇಕು ಎಂದು ಜನರು ಆಗ್ರಹಿಸಿದ್ದಾರೆ. ಆಚರಣೆಯ ಸಂಬಂಧ ಮಠಾಧೀಶರಾದ ಮಾಸಿಲಮಣಿ ದೇಶಿಕ ಜ್ಞಾನಸಂಬಂಧ ಪರಮಾಚಾರ್ಯ ಸ್ವಾಮಿಗಳು “ಯಾವುದೇ ಕಾರಣಕ್ಕೂ ಅಚರಣೆ ನಡೆದೇ ನಡೆಯುತ್ತದೆ. ಸ್ವತಃ ನಾನೇ ಪಲ್ಲಕ್ಕಿಯನ್ನ ಹೊರುತ್ತೇನೆ. ಆದರೆ ಅಚರಣೆಯನ್ನು ನಿಲ್ಲಿಸುವುದಿಲ್ಲ. ಪಲ್ಲಕ್ಕಿಯನ್ನು ಹೊರುವುದರಿಂದ ಯಾವುದೇ ಹಕ್ಕುಗಳಿಗೆ ತೊಂದರೆಯಾಗುವುದಿಲ್ಲ. ಪಲ್ಲಕ್ಕಿ ಹೊರಲು ಯಾರಿಗೂ ಒತ್ತಾಯ ಮಾಡುವುದಿಲ್ಲ. ಭಕ್ತಾದಿಗಳು ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಾರೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾಜಿ ಐಪಿಎಸ್‌ ಅಧಿಕಾರಿ ಮತ್ತು ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ “ಧರ್ಮಪುರ ಅಧೀನಂ ಮಠದ ಶತಮಾನಗಳಷ್ಟು ಹಳೆಯದಾದ ‘ಪಟ್ಟಿನ ಪ್ರವೇಶ’ದ ನಿಷೇಧವು ತಮಿಳುನಾಡಿನ ನಾಗರೀಕ ಸಂಸ್ಕೃತಿಗೆ ಮಾಡಿದ ಅಪಚಾರವಾಗಿದೆ. ಕಾನೂನು ಬಾಹಿರ ಆದೇಶದ ವಿರೋಧವಾಗಿ ಆಚರಣೆ ನಡೆದೇ ನಡೆಯುತ್ತದೆ. ನಾನು ಸ್ವತಃ ಪಲ್ಲಕ್ಕಿ ಹೊರಲು ಸಿದ್ಧನಿದ್ದೇನೆ” ಎಂದು ಟ್ವೀಟರ್‌ ನಲ್ಲಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!