ಮೊಬೈಲ್ ಚಾರ್ಜ್‌ ಹಾಕುವ ನೆಪದಲ್ಲಿ ಗಲ್ಲಾಪಟ್ಟಿಗೆಯಲ್ಲಿದ್ದ ಹಣ ಕದ್ದು ಪರಾರಿಯಾದ ಕಳ್ಳ!

ಹೊಸದಿಗಂತ ವರದಿ, ಮಡಿಕೇರಿ
ಮೊಬೈಲ್ ಚಾರ್ಜ್ ಗೆ ಹಾಕುವ ನೆಪದಲ್ಲಿ ಕಳ್ಳನೊಬ್ಬ ಲ್ಯಾಬ್ ಗಲ್ಲಾ ಪೆಟ್ಟಿಗೆಗೆ ಕನ್ನ ಹಾಕಿ ಹಣ ಎಗರಿಸಿರುವ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ.
ಅಲ್ಲಿನ ಪೂಜಾ ಕಾಂಪ್ಲೆಕ್ಸ್’ನಲ್ಲಿರುವ ಲ್ಯಾಬ್‍ಗೆ ಆಗಮಿಸಿದ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ ಚಾರ್ಜ್‌ ಮಾಡಲು ಅವಕಾಶ ನೀಡುವಂತೆ ಬೇಡಿಕೆಯಿಟ್ಟಿದ್ದಾನೆ. ಅದೇವೇಳೆ ಸಿಬ್ಬಂದಿ ಲ್ಯಾಬ್ ನಿಂದ ಹೊರಗೆ ಬಂದಾಗ ಕ್ಯಾಶ್ ಬಾಕ್ಸ್’ಗೆ ಕೈ ಹಾಕಿ ಹಣವನ್ನು ಕದ್ದು ಪರಾರಿಯಾಗಿದ್ದಾನೆ.
ಹೊರಗೆ ಹೋಗಿದ್ದ ಸಿಬ್ಬಂದಿ ಒಳ ಬಂದು ನೋಡಿದಾಗ ವ್ಯಕ್ತಿ ನಾಪತ್ತೆಯಾಗಿದ್ದ. ಸಂಶಯಗೊಂಡು ಕ್ಯಾಶ್ ಬಾಕ್ಸ್ ನೋಡಿದಾಗ ರೂ. 2,400 ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!