May 28, 2026
Thursday, May 28, 2026
spot_img

Rice series 43 | ಬಾಯಲ್ಲಿ ನೀರೂರಿಸುವ ಪಾಲಕ್ ಖಿಚಡಿ: ಕೇವಲ 20 ನಿಮಿಷಗಳಲ್ಲಿ ತಯಾರಿಸಿ!

ಪಾಲಕ್ ಖಿಚಡಿ ಒಂದು ಆರೋಗ್ಯಕರ ಮತ್ತು ಪೌಷ್ಟಿಕವಾದ ಖಾದ್ಯವಾಗಿದ್ದು, ಇದು ಅನ್ನ, ಹೆಸರು ಬೇಳೆ ಮತ್ತು ಪಾಲಕ್ ಸೊಪ್ಪಿನಿಂದ ತಯಾರಿಸಲಾಗುತ್ತದೆ. ಜೀರ್ಣಕ್ರಿಯೆಗೆ ಇದು ತುಂಬಾ ಹಗುರ.

ಸಾಮಾಗ್ರಿಪ್ರಮಾಣ
ಅಕ್ಕಿ (ಸೋನಾ ಮಸೂರಿ ಅಥವಾ ಬಾಸ್ಮತಿ)1/2 ಕಪ್
ಹೆಸರು ಬೇಳೆ 1/2 ಕಪ್
ಪಾಲಕ್ ಸೊಪ್ಪು 1ಕಟ್ಟು
ನೀರು3-4 ಕಪ್
ತುಪ್ಪ/ಎಣ್ಣೆ 2ಚಮಚ
ಒಗ್ಗರಣೆಗೆ:
ಜೀರಿಗೆ 1ಚಮಚ
ಇಂಗು1/4 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1ಚಮಚ
ಹಸಿಮೆಣಸಿನಕಾಯಿ 2 (ಸಣ್ಣಗೆ ಹೆಚ್ಚಿದ್ದು)
ಅರಿಶಿನ ಪುಡಿ 1/2 ಚಮಚ
ಉಪ್ಪು ರುಚಿಗೆ ತಕ್ಕಷ್ಟು

ಪಾಲಕ್ ಪ್ಯೂರಿ ತಯಾರಿ
ಮೊದಲಿಗೆ, ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಬಿಸಿ ನೀರಿನಲ್ಲಿ 2ನಿಮಿಷಗಳ ಕಾಲ ಬೇಯಿಸಿ. ನಂತರ ತಕ್ಷಣವೇ ಅದನ್ನು ತಣ್ಣೀರಿನಲ್ಲಿ ಹಾಕಿ, ಹಾಗೆ ಮಾಡುವುದರಿಂದ ಸೊಪ್ಪಿನ ಹಸಿರು ಬಣ್ಣ ಹಾಗೆಯೇ ಉಳಿಯುತ್ತದೆ. ಬೇಯಿಸಿದ ಪಾಲಕ್ ಸೊಪ್ಪನ್ನು ಮಿಕ್ಸರ್ ಜಾರ್‌ಗೆ ಹಾಕಿ, ಸ್ವಲ್ಪ ನೀರು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.

ಅಕ್ಕಿ ಮತ್ತು ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು 20-30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಕುಕ್ಕರ್‌ನಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಬಿಸಿ ಮಾಡಿ. ಜೀರಿಗೆ ಮತ್ತು ಇಂಗನ್ನು ಸೇರಿಸಿ. ಜೀರಿಗೆ ಸಿಡಿಯಲು ಪ್ರಾರಂಭಿಸಿದ ನಂತರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿ ಸೇರಿಸಿ, ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.

ನೆನೆಸಿದ ಅಕ್ಕಿ ಮತ್ತು ಬೇಳೆಯನ್ನು ನೀರು ಬಸಿದು ಕುಕ್ಕರ್‌ಗೆ ಸೇರಿಸಿ, 1ನಿಮಿಷ ಹುರಿಯಿರಿ. ತಯಾರಿಸಿದ ಪಾಲಕ್ ಪ್ಯೂರಿ, ಅರಿಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ೩ ರಿಂದ ೪ ಕಪ್ ನೀರನ್ನು ಸೇರಿಸಿ. ಎಲ್ಲವನ್ನೂ ಮತ್ತೊಮ್ಮೆ ಚೆನ್ನಾಗಿ ಬೆರೆಸಿ.

ಕುಕ್ಕರ್ ಮುಚ್ಚಳವನ್ನು ಮುಚ್ಚಿ, ಮಧ್ಯಮ ಉರಿಯಲ್ಲಿ 3ರಿಂದ 4ವಿಸೀಲ್ ಬರುವವರೆಗೂ ಬೇಯಿಸಿ. ಕುಕ್ಕರ್‌ನ ಒತ್ತಡ ತಾನಾಗಿಯೇ ಇಳಿದ ನಂತರ ಮುಚ್ಚಳ ತೆಗೆದು, ಚೆನ್ನಾಗಿ ಕಲಸಿ. ಬಿಸಿ ಬಿಸಿಯಾದ ಪಾಲಕ್ ಖಿಚಡಿಯನ್ನು ತುಪ್ಪ, ಮೊಸರು, ಅಥವಾ ಉಪ್ಪಿನಕಾಯಿಯೊಂದಿಗೆ ಬಡಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !