Saturday, March 25, 2023

Latest Posts

ಹೊನ್ನಾವರದ ಕಾಸರಕೋಡ ತೀರದಲ್ಲಿ ನೂರಾರು ಮೊಟ್ಟೆ ಇಟ್ಟ ರಿಡ್ಲೆ ಕಡಲಾಮೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಹೊನ್ನಾವರದ ಕಾಸರಕೋಡ ಟೊಂಕದ ಕಡಲತೀರದ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಗಾಗಿ ಹೊ.ಪೊರ್ಟ್.ಪೈವೇಟ್.ಲಿ. ಕಂಪನಿಗೆ ಸರ್ಕಾರ ಹಸ್ತಾಂತರ ಮಾಡಿರುವ ಸ್ಥಳದಲ್ಲಿ ಮತ್ತು ತೀರ ಸನಿಹದ ಕಡಲತೀರದಲ್ಲಿ ಭಾನುವಾರ ರಿಡ್ಲೆ ಜಾತಿಯ ಮೂರು ಕಡಲಾಮೆಗಳು ನೂರಾರು ಸಂಖ್ಯೆಯಲ್ಲಿ ಮೊಟ್ಟೆ ಇಟ್ಟಿರುವುದು ಕಂಡುಬಂದಿದೆ.

ಕಳೆದ ಎರಡು ತಿಂಗಳ ಅವಧಿಯಲ್ಲಿ ಇಲ್ಲಿನ ಕಡಲತೀರದಲ್ಲಿ ಒಟ್ಟು 19 ಆಲಿವ್ ರಿಡ್ಲೆ ಜಾತಿಯ ಕಡಲಾಮೆಗಳು ನೂರಾರು ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಇಟ್ಟಿದ್ದು,ಮೊದಲ ಗೂಡಿನ ಮೊಟ್ಟೆಗಳಿಂದ ಶನಿವಾರ 20ಕ್ಕೂ ಹೆಚ್ಚು ಮರಿಗಳು ಜನಿಸಿವೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಸ್ಥಳೀಯರು ಸೇರಿ ಕಡಲಾಮೆ ಮರಿಗಳಿಗೆ ಪೂಜೆ ಸಲ್ಲಿಸಿ ಸಮುದ್ರಕ್ಕೆ ಸೇರಿಸಿ ಸಂಭ್ರಮಪಟ್ಟರು.

ಸ್ಥಳೀಯರ ಕಾಳಜಿಯ ನಡುವೆಯೂ ಉಬ್ಬರದ ಸಂದರ್ಭದಲ್ಲಿ ಸಮುದ್ರದ ನೀರು ಕೆಲವೊಮ್ಮೆ ಗೂಡುಗಳಿಗೆ ಸೇರಿ ಮೊಟ್ಟೆಗಳಿಗೆ ಹಾನಿ ಉಂಟಾಗುವ ಸಾಧ್ಯತೆ ಇದ್ದರೂ ಮೊಟ್ಟೆಗಳನ್ನು ಅನ್ಯರು ಕಳ್ಳತನ ಮಾಡದಂತೆ ಸ್ಥಳೀಯ ಮೀನುಗಾರರು ಕಾಳಜಿ ವಹಿಸುವುದು ಇಲ್ಲಿನ ವಿಶೇಷತೆಯಾಗಿದೆ.

ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಣೆ ಮಾಡುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಉಪವಲಯಾಧಿಕಾರಿ ಗೌಸ, ಸಹಾಯಕ ಸಿಬ್ಬಂದಿ ವಿನಾಯಕ ಭಟ್ಟ, ಮತ್ತು ಸೋಮಯ್ಯ, ಜೈನಜಟಗೇಶ್ವರ ಸಂಘದ ಸದಸ್ಯರು ತೊಡಗಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!