Friday, September 30, 2022

Latest Posts

ರಿಶಭ್ ಶೆಟ್ಟಿ ʼಕಾಂತಾರʼ ಟ್ರೈಲರ್‌ಗೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಿಶಬ್‌ ಶೆಟ್ಟಿ ಅಭಿನಯ ಹಾಗೂ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ‘ಕಾಂತಾರ’- ಒಂದು ದಂತಕತೆʼ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಟ್ರೇಲರ್‌ ಯ್ಯೂಟ್ಯೂಬ್‌ ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 1 ಮಿಲಿಯನ್‌, ಒಟ್ಟಾರೆ 3 ಮಿಲಿಯನ್‌ ಗಿಂತಲೂ ಹೆಚ್ಚಿನ ವೀವ್ಸ್‌ ಪಡೆದು ಮುನ್ನುಗ್ಗುತ್ತಿದೆ.
ನಟ ರಿಷಬ್ ಶೆಟ್ಟಿ ಈ ಚಿತ್ರದ ನಿರ್ದೇಶನ ಹೊನೆ ಹೊರುವ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಚಿತ್ರ ಅದ್ಬುತವಾಗಿ ಮೂಡಿಬಂದಿರುವ ಝಲಕ್‌ ಟ್ರೇಲರ್‌ ನಲ್ಲೇ ದೊರಕುತ್ತಿದೆ. ಗ್ರಾಮೀಣ ಭಾಗದಲ್ಲಿ ಶ್ರೀಗಂಧದ ಕಳ್ಳಸಾಗಣೆಯ ಕುರಿತಾದ ರೋಮಾಂಚಕಾರಿ ಕಥೆಯನ್ನು ಚಿತ್ರ ಹೊತ್ತಿದೆ. ‘ಕಾಂತಾರ’ ಚಿತ್ರದ ಹಿನ್ನೆಲೆ ಸಂಗೀತವು ಪುರಾಣ, ಐತಿಹ್ಯ ಮತ್ತು ಮೂಢನಂಬಿಕೆಗಳ ಕಥೆಯನ್ನು ಸೂಕ್ಷ್ಮವಾಗಿ ಅಭಿವ್ಯಕ್ತಗೊಳಿಸುತ್ತದೆ.

ಕರಾವಳಿ ಕರ್ನಾಟಕದ ಒಳನಾಡಿನಲ್ಲಿ ಚಿತ್ರೀಕರಿಸಲಾದ ವಿಶಿಷ್ಟವಾದ ಭೂದೃಶ್ಯಗಳು ಮತ್ತು ಅಲ್ಲಿನ ಪದ್ಧತಿಗಳು, ಸಂಪ್ರದಾಯಗಳು, ಗುಪ್ತ ನಿಧಿಗಳ ರಹಸ್ಯ, ಕಂಬಳ ಜಾನಪದದ ಅಂಶಗಳನ್ನು ಟ್ರೈಲರ್‌ ನಲ್ಲಿ ಕಾಣಬಹುದು. ಕೆಜಿಎಫ್ ತಯಾರಕರಾದ ಹೊಂಬಾಳೆ ಫಿಲ್ಮ್ಸ್‌ನ ಮೇಕಿಂಗ್‌ನಲ್ಲಿ ‘ಕಾಂತಾರ’ ಮತ್ತೊಂದು ಅದ್ಭುತ. ಚಿತ್ರದ ಮನಮೋಹಕ ಟ್ರೈಲರ್ ನೋಡಿದ ಮೇಲೆ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದೇವೆ ಎಂದು ಹಲವಾರು ವೀಕ್ಷಕರು ಕಾಮೆಂಟ್‌ ಮಾಡಿದ್ದಾರೆ.
ಚಿತ್ರದ ನಾಯಕಿಯಾಗಿ ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತವಿದೆ. ಖ್ಯಾತ ನಟರಾದ ಕಿಶೋರ್, ಪ್ರಮೋದ್ ಶೆಟ್ಟಿ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!