RCB VS SRH | ಸನ್‌ ರೈಸರ್ಸ್‌ ಸವಾಲು ಗೆಲ್ಲುವುದೇ ಆರ್ಸಿಬಿ? ಮತ್ತೊಂದು ಗೆಲುವಿನ ಮೇಲೆ ಪಾಫ್‌ ಬಳಗದ ಕಣ್ಣು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್‌ ಪ್ರಿಯರಿಗಿಂದು ಡಬಲ್‌ ಧಮಾಕಾ. 3.30ಕ್ಕೆ ನಡೆಯಲಿರುವ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡವು ಅಂಕಪಟ್ಟಿಯ ಟಾಪರ್‌ ಗುಜಾರಾತ್‌ ಟೈಟಾನ್ಸ್‌ ತಂಡವನ್ನು ಎದುರಿಸಲಿದೆ. ಸಂಜೆ 7.30ಕ್ಕೆ ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಮತ್ತೊಂದು ಪಂದ್ಯದಲ್ಲಿ ಪಾಫ್‌ ಡುಪ್ಲೆಸಿ ನಾಯಕತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವನ್ನು ಎದುರಿಸಲಿದೆ. ಉಭಯ ತಂಡಗಳು ಪಂದ್ಯವಳಿಯಲ್ಲಿ ಸತತ ಜಯ ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿದ್ದು ಈದಿನ ಪಂದ್ಯದಲ್ಲಿ ಗೆಲುವು ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಪಂದ್ಯ ನಡೆಯುತ್ತಿರುವ ಬ್ರೆಬೋರ್ನ್‌ ಕ್ರಿಡಾಂಗಣದಲ್ಲಿ ಇಲ್ಲಿಯವರೆಗೆ ನಡೆದ ಹೆಚ್ಚಿನ ಪಂದ್ಯಗಳು ಹೈಸ್ಕೋರಿಂಗ್‌ ಸ್ಕೋರಿಂಗ್ ಪಂದ್ಯಗಳಾಗಿದ್ದು ಇಂದಿನ ಪಂದ್ಯದಲ್ಲೂ ರನ್‌ ಮಳೆ ಹರಿಯುವ ನಿರೀಕ್ಷೆಗಳಿವೆ.
ಎರಡೂ ತಂಡಗಳಿಗೆ ಆರಂಭಿಕರ ವೈಫಲ್ಯವೇ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿದೆ. ಫಾಫ್‌ ಡುಪ್ಲೆಸಿಸ್‌ ಉತ್ತಮವಾಗಿ ಆಡುತ್ತಿದ್ದರೂ ಮತ್ತೊರ್ವ ಆರಂಭಿಕ ಅನುಜ್‌ ರಾವ್‌ ಅಸ್ಥಿರ ಪ್ರದರ್ಶನ ತೋರುತ್ತಿರುವುದು ಆರ್ಸಿಬಿ ತಂಡಕ್ಕೆ ಚಿಂತೆಯಾಗಿ ಪರಿಣಮಿಸಿದೆ. ಸನ್‌ ರೈಸರ್ಸ್‌ ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಕೇನ್ ವಿಲಿಯಮ್ಸನ್ ಜೋಡಿಯಿಂದಲೂ ಸಹ ಉತ್ತಮ ಪ್ರದರ್ಶನ ಮೂಡಿಬಂದಿಲ್ಲ.
ಈ ಪಂದ್ಯವು ಆರ್ಸಿಬಿ ಬ್ಯಾಟರ್ಸ್‌ ವರ್ಸಸ್‌ ಸನ್‌ ರೈಸರ್ಸ್‌ ಬೌಲರ್ಸ್‌ ಎಂದು ಪರಿಗಣಿತವಾಗಿದೆ. ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್ ಮತ್ತು ಟಿ ನಟರಾಜನ್ ಅವರಿರುವ ಎಸ್‌ ಆರ್‌ಹೆಚ್‌ ಬೌಲಿಂಗ್‌ ವಿಭಾಗವು ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ದಿನೇಶ್ ಕಾರ್ತಿಕ್ ವರಿರುವ ಆರ್ಸಿಬಿಯ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ವಿರುದ್ಧ ಸೆಣಸಲಿದೆ.
ಕೊಹ್ಲಿಯನ್ನು ಹೊರತುಪಡಿಸಿ ಉತ್ತಮ ಫಾರ್ಮ್‌ನಲ್ಲಿರುವ ಆರ್‌ಸಿಬಿ ಬ್ಯಾಟ್ಸ್‌ ಮನ್‌ ಗಳನ್ನು ನಿಯಂತ್ರಿಸುವುದು ಎಸ್‌ಆರ್‌ಹೆಚ್ ಬೌಲರ್‌ಗಳಿಗೆ ಸುಲಭದ ಕೆಲಸವಲ್ಲ. ಕೆಳಕ್ರಮಾಂಕದಲಲಿ ದಿನೇಶ್‌ ಕಾರ್ತಿಕ್‌ ಈ ಬಾರಿ ವಿಜೃಂಭಿಸುತ್ತಿದ್ದಾರೆ. ಜೋಶ್ ಹ್ಯಾಜಲ್‌ವುಡ್ ಭರ್ಜರಿ ಫಾರ್ಮ್‌ ಡು ಪ್ಲೆಸಿಸ್ ಪಡೆಯ ಬೌಲಿಂಗ್‌ ವಿಭಾಗವನ್ನು ಬಲಾಢ್ಯಗೊಳಿಸಿದೆ. ಹರ್ಷಲ್ ಪಟೇಲ್, ವನಿಂದು ಹಸರಂಗ ಮಿಂಚಿದರೆ ಆರ್ಸಿಬಿ ಗೆಲುವು ಸುಲಭವಾಗಲಿದೆ.
ರಾಹುಲ್ ತ್ರಿಪಾಠಿ ಎಸ್‌ ಆರ್‌ ಎಚ್‌ ತಂಡದ ಬ್ಯಾಟಿಂಗ್‌ ಶಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಕೆಕೆಆರ್‌ ವಿರುದ್ಧ ರಾಹುಲ್‌ ಅಬ್ಬರಿಸಿದ್ದರು. ಆತ ಎಸ್‌ ಆರ್‌ ಎಚ್‌ ವಿರುದ್ಧ ಅತ್ಯಧಿಕ ರನ್-ಸ್ಕೋರರ್ ಆಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಏಡನ್ ಮಾರ್ಕ್ರಾಮ್ ಕೂಡ ಉತ್ತಮ ಲಯದಲ್ಲಿದ್ದಾರೆ.

ಸಂಭವನೀಯ XIಗಳು:
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ಸಿ), ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ಜೆ ಸುಚಿತ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ಸಿ), ಅನುಜ್‌ ರಾವತ್‌, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಜೋಶ್ ಹ್ಯಾಜಲ್‌ವುಡ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!