ಆರ್ಸಿಬಿ ಹ್ಯಾಟ್ರಿಕ್‌ ಗೆಲುವಿನ ಓಟಕ್ಕೆ ಬ್ರೇಕ್; ಮೊದಲ ಜಯ ಕಂಡ ಸಿಎಸ್‌ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮುಂಬೈನ ಡಿ ವೈ ಪಾಟೀಲ್ ಸ್ಪೋರ್ಟ್ಸ್‌ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು 23 ರನ್ ಗಳ ಅಧಿಕಾರಯುತ ಗೆಲುವು ಕಂಡಿದೆ.
ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿದ ಚೆನ್ನೈ ಪರ ಆರಂಭಿಕ ರಾಬಿನ್‌ ಉತ್ತಪ್ಪ(88) ಹಾಗೂ ಶಿವಂ ದೂಬೆ(95) ಅಬ್ಬರಿಸಿದರು. ಆರ್ಸಿಬಿ ಬೌಲರ್‌ ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ ಮೈದಾನದ ಮೈದಾನದ ಮೂಲೆ ಮೂಲೆಗೂ ಬೌಂಡರಿ ಸಿಕ್ಸರ್‌ ಗಳ ಸುರಿಮಳೆಗೈದರು.
ಈದರ ಫಲವಾಗಿ ಚೆನೈ ನಿಗದಿತ 20 ಓವರ್‌ ಗಳಲ್ಲಿ 215 ರನ್‌ ಗಳ ಭಾರೀ ಮೊತ್ತವನ್ನು ಕಲೆಹಾಕಿತು.
ಬೃಹತ್ ಗುರಿ ಬೆನ್ನತ್ತಿದ ಆರ್ಸಿಬಿಗೆ ಆರಂಭಿಕರು ಕೈಕೊಟ್ಟರು. ತಂಡವು ಒಂದು ಹಂತದಲ್ಲಿ 5 ಓವರ್‌ ಗಳಲ್ಲಿ 42 ಕ್ಕೆ ರನ್‌ ಗಳಿಗೆ 3 ವಿಕೆ ಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಗಳು ಕೊನೆ ವರೆಗೆ ಛಲಬಿಡದೆ ಹೋರಾಡಿದ ಪರಿಣಾಮ ಒಂದು ಹಂತದಲ್ಲಿ ಆರ್ಸಿಬಿ ಗೆಲ್ಲುವ ಭರವಸೆ ಮೂಡಿತ್ತು.
ಶಹಬಾಝ್‌ ಅಹ್ಮದ್‌ (41), ಸುಯಸ್‌ ಪ್ರಭುದೇಸಾಯ್ (34) ಮತ್ತು ದಿನೇಶ್‌ ಕಾರ್ತಿಕ್‌ (34) ಅವರ ಆಕ್ರಮಣಾಕಾರಿ ಆಟವಾಡಿದರು. ಆದರೆ ನಿರ್ಣಾಯಕ ಹಂತಗಳಲ್ಲಿ ವಿಕೆಟ್‌ ಗಳನ್ನು ಕೈಚೆಲ್ಲಿದ್ದರಿಂದ ಅಂತಿಮವಾಗಿ 20 ಓವರ್‌ಗಳಲ್ಲಿ 193/9 ರನ್‌ ದಾಖಲಿಸುವಲಷ್ಟೇ ಶಕ್ತವಾಯಿತು. ಆ ಮೂಲಕ 23ರನ್ ಗಳ ಅಂತರದಲ್ಲಿ ಸೋಲು ಕಂಡಿತು.
ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಮಿಂಚಿದ ಮಿಸ್ಟರಿ ಸ್ಪಿನ್ನರ್‌ ಮಹೀಶ ತೀಕ್ಷಣ 4 ಓವರ್‌ಗಳಲ್ಲಿ 33ಕ್ಕೆ 4 ವಿಕೆಟ್‌ ಕಿತ್ತು ಸಿಎಸ್‌ಕೆ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಒಸಿದರು. ಮಹತ್ವದ ಕೊಡುಗೆ ಕೊಟ್ಟರು. ಕ್ಯಾಪ್ಟರ್‌ ರವೀಂದ್ರ ಜಡೇಜಾ 39ಕ್ಕೆ 3 ವಿಕೆಟ್‌ ಪಡೆದು ಉತ್ತಮ ಸಾಥ್‌ ನೀಡಿದರು. ಇದರೊಂದಿಗೆ ಐಪಿಎಲ್ 2022 ಟೂರ್ನಿಯಲ್ಲಿ ಸಿಎಸ್‌ಕೆ ಮೊದಲ ಜಯದೊಂದಿಗೆ ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು. ಈ ಹಿಂದಿನ ನಾಲ್ಕು ಪಂದ್ಯಗಳನ್ನು ಸೋತಿದ್ದ ಚೆನ್ನೈ 9ನೇ ಸ್ಥಾನದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!