November 9, 2026
Monday, November 9, 2026
spot_img

ರಾಜವಂಶದ ಆಸ್ತಿ ವಿವಾದ; ನ್ಯಾಯಾಲಯವೇ ಅಂತಿಮ ತೀರ್ಪು ನೀಡಲಿದೆ: ಯದುವೀರ್ ಒಡೆಯರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೈಸೂರು ರಾಜವಂಶದ ಆಸ್ತಿಗಳ ಹಕ್ಕು ಮತ್ತು ಮಾಲೀಕತ್ವದ ವಿಚಾರವಾಗಿ ನಡೆಯುತ್ತಿರುವ ವಿವಾದಕ್ಕೆ ನ್ಯಾಯಾಲಯವೇ ಅಂತಿಮ ತೀರ್ಪು ನೀಡಲಿದೆ. ಈ ಪ್ರಕರಣದಲ್ಲಿ ಶಾಸಕಾಂಗ ಹಾಗೂ ಕಾರ್ಯಾಂಗ ಎರಡೂ ದುರುಪಯೋಗವಾಗಿವೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದ್ದಾರೆ.

ಬೀದಿಯಲ್ಲಿ ನಿಂತು ಚರ್ಚಿಸುವುದರಿಂದ ಪ್ರಯೋಜನವಿಲ್ಲ

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜವಂಶದ ಆಸ್ತಿಗಳು ಕುಟುಂಬಕ್ಕೆ ಸೇರಿವೆಯೇ ಅಥವಾ ಸರ್ಕಾರದ ಸ್ವತ್ತಾಗಿವೆಯೇ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ. ಈ ವಿಚಾರವನ್ನು ಬೀದಿಯಲ್ಲಿ ನಿಂತು ಚರ್ಚಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಮೊದಲು ನ್ಯಾಯಾಲಯದ ತೀರ್ಪು ಬರಲಿ. ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅನಗತ್ಯ ಚರ್ಚೆ ನಡೆಸುವುದು ಸೂಕ್ತವಲ್ಲ ಎಂದು ಹೇಳಿದರು.

ಇದನ್ನೂ ಓದಿ:

ಒಪ್ಪಂದದ ಸಂಪೂರ್ಣ ವಿವರ ಗೊತ್ತಿಲ್ಲ

ಅರಮನೆ ಮತ್ತು ಸರ್ಕಾರದ ನಡುವೆ ಒಪ್ಪಂದ ನಡೆದ ಸಂದರ್ಭದಲ್ಲಿ ತಾನು ಬಾಲಕನಾಗಿದ್ದೆ. ಹೀಗಾಗಿ ಆ ಒಪ್ಪಂದದ ಸಂಪೂರ್ಣ ವಿವರಗಳು ತಮಗೆ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದರು. ದಸರಾ ಆಚರಣೆಯಲ್ಲಿನ ಅವ್ಯವಸ್ಥೆಗಳ ಕುರಿತು ಪ್ರತಿಕ್ರಿಯಿಸಿ, ಪ್ರತಿವರ್ಷವೂ ಕೆಲವು ಲೋಪದೋಷಗಳು ಕಂಡುಬರುತ್ತವೆ. ಮುಂದಿನ ದಿನಗಳಲ್ಲಿ ಅವುಗಳನ್ನು ಸರಿಪಡಿಸಿಕೊಂಡು ಉತ್ತಮವಾಗಿ ದಸರಾ ಆಚರಿಸಲು ಪ್ರಯತ್ನಿಸಬೇಕು ಎಂದರು.

ಈಗ ದಸರಾ ಮುಗಿದಿದ್ದು, ಮುಂದಿನ ಕೆಲಸಗಳತ್ತ ಗಮನಹರಿಸಬೇಕಿದೆ. ಹಳೆಯ ವಿಚಾರವನ್ನೇ ಮತ್ತೆ ಮತ್ತೆ ಚರ್ಚಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಇನ್ನು ಎಥೆನಾಲ್ ವಿಚಾರವಾಗಿ ನಡೆಯುತ್ತಿರುವ ಆರೋಪ-ಪ್ರತ್ಯಾರೋಪಗಳ ಬಗ್ಗೆ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಈ ವಿಷಯವನ್ನು ಮುನ್ನೆಲೆಗೆ ತರಲಾಗಿದೆ ಎಂದು ಆರೋಪಿಸಿದರು.

Must Read

Skip to toolbar