ಬಾಕ್ಸ್ ಆಫೀಸ್ನಲ್ಲಿ ಸರ್ವಾಧಿಪತ್ಯ ಮುಂದುವರಿಸಿದ ‘ಆರ್​ಆರ್​ಆರ್​’: 11 ದಿನದಲ್ಲಿ ಚಿತ್ರದ ಕಲೆಕ್ಷನ್ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್

ವಿಶ್ವದಲ್ಲಿ ತನ್ನ ಸರ್ವಾಧಿಪತ್ಯ ಮುಂದುವರಿಸಿದ ‘ಆರ್​ಆರ್​ಆರ್​’ ಸಿನಿಮಾ. ದಿನೇ ದಿನೇ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆಯುತ್ತಿದ್ದು, ಭರ್ಜರಿ ಗೆಲುವಿನತ್ತ ಮುನ್ನುಗುತ್ತಿದೆ.
ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ರಾಜಮೌಳಿ ನಿರ್ದೇಶನದಲ್ಲಿ ರಾಮ್ ಚರಣ್ ಹಾಗೂ ಜ್ಯೂ.ಎನ್​ಟಿಆರ್ ನಟಿಸಿರುವ ಚಿತ್ರ ಗಳಿಕೆಯಲ್ಲಿ ಹಲವು ಸ್ಟಾರ್ ನಟರ ದಾಖಲೆಯನ್ನು ಧೂಳೀಪಟ ಮಾಡಿದೆ.
‘ಆರ್​ಆರ್​ಆರ್​’ ಸಿನಿಮಾ ಕೇವಲ 11 ದಿನದಲ್ಲಿ 900 ಕೋಟಿ ಕ್ಲಬ್ ಸೇರಿಕೊಂಡಿದೆ. ದೇಶಭಕ್ತಿಯ ಕತೆಯನ್ನು ಚಿತ್ರ ಹೊಂದಿರುವುದರಿಂದ ಸಹಜವಾಗಿಯೇ ಚಿತ್ರ ಎಲ್ಲರಿಗೂ ಕನೆಕ್ಟ್ ಆಗಿದೆ. ಪರಿಣಾಮವಾಗಿ ಗಲ್ಲಾಪೆಟ್ಟಿಗೆಯಲ್ಲಿ ‘ಆರ್​ಆರ್​ಆರ್​’ ನಾಗಾಲೋಟ ಮುಂದುವರೆದಿದೆ.
ರಾಜಮೌಳಿ ನಿರ್ದೇಶನದ ಚಿತ್ರ ತೆರೆಕಂಡು ಕೇವಲ 11 ದಿನಗಳಾಗಿರುವುದಷ್ಟೇ. ಸದ್ಯಕ್ಕೆ ಏಪ್ರಿಲ್ 13-14ರವರೆಗೆ ದೊಡ್ಡ ಪ್ಯಾನ್ ಇಂಡಿಯಾ ಚಿತ್ರಗಳೂ ತೆರೆಕಾಣುವುದಿಲ್ಲ. ಈ ಹಿನ್ನೆಲೆಯಲ್ಲಿ ‘ಆರ್​ಆರ್​ಆರ್​’ ಮತ್ತಷ್ಟು ಗಳಿಕೆ ಮಾಡಲಿದ್ದು, ಒಟ್ಟಾರೆ ಎಷ್ಟು ಗಳಿಸಲಿದೆ ಎನ್ನುವುದು ಸದ್ಯದ ಕುತೂಹಲ.
‘ಆರ್​ಆರ್​ಆರ್’​ ಮೊದಲ ವಾರದ ಗಳಿಕೆ 709.36 ಕೋಟಿ ರೂಗಳು. ಎರಡನೇ ವಾರದ- ಮೊದಲ ದಿನ 41.53 cr, ಎರಡನೇ ದಿನ 68.17 cr, ಮೂರನೇ ದಿನ- 82.40 cr, ನಾಲ್ಕನೇ ದಿನ- 20.34 cr ಮೂಲಕ ಒಟ್ಟು 921.80 ಕೋಟಿ ರೂಗಳನ್ನು ‘ಆರ್​ಆರ್​ಆರ್​’ ಬಾಚಿಕೊಂಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!