IT RAID | ಮಾಜಿ ಕಾರ್ಪೋರೇಟರ್ ಸಂಬಂಧಿ ಮನೆಯಲ್ಲಿ 40 ಕೋಟಿ ರೂಪಾಯಿ ನಗದು ಪತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆ ತಡರಾತ್ರಿ ಬೆಂಗಳೂರಿನ ನಾನಾ ಕಡೆ ಐಟಿ ದಾಳಿ ನಡೆದಿದ್ದು, ಮಾಜಿ ಕಾರ್ಪೋರೇಟರ್ ಸಂಬಂಧಿ ಮನೆಯಲ್ಲಿ 40 ಕೋಟಿ ರೂಪಾಯಿಗೂ ಹೆಚ್ಚು ನಗದು ಹಣ ದೊರೆತಿದೆ.

ಆರ್‌ಟಿ ನಗರದ ಆತ್ಮಾನಂದ ಕಾಲೋನಿಯಲ್ಲಿರುವ ಫ್ಲಾಟ್‌ನಲ್ಲಿ ಮಂಚದ ಕೆಳಗೆ ಹಣವನ್ನು ಬಾಕ್ಸ್‌ನಲ್ಲಿ ಇಡಲಾಗಿತ್ತು ಎಂದು ಐಟಿ ಮೂಲಗಳು ಮಾಹಿತಿ ನೀಡಿವೆ.

ಮಾಜಿ ಕಾರ್ಪೋರೇಟರ್ ಸಂಬಂಧಿ ಪ್ರದೀಪ್ ಎನ್ನುವವರಿಗೆ ಸೇರಿದ ಫ್ಲಾಟ್ ಇದಾಗಿದ್ದು, 23 ಬಾಕ್ಸ್‌ನಲ್ಲಿ 40 ಕೋಟಿ ರೂಪಾಯಿ ಹಣ ಇಡಲಾಗಿದೆ. ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!