ಹೊಸ ದಿಗಂತ ಡಿಜಿಟಲ್ ಡೆಸ್ಕ್
ಶಂಕರ ನೇತ್ರಾಲಯದ ಸಂಸ್ಥಾಪಕ ಡಾ ಎಸ್ ಎಸ್ ಬದರೀನಾಥ (83) ಅವರು ಮಂಗಳವಾರ ನಿಧನರಾಗಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಅವರ ನಿಧನಕ್ಕೆ ಸಂತಾಪ ಸೂಚಿಸಿದೆ. ರಾ.ಸ್ವ.ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಅಗಲಿದ ನೇತ್ರ ತಜ್ಞ ಬದರೀನಾಥರಿಗೆ ನುಡಿನಮನಗಳನ್ನು ಅರ್ಪಿಸುತ್ತ, “45 ವರ್ಷಗಳ ಹಿಂದೆ ಅವರು ಸ್ಥಾಪಿಸಿದ ಶಂಕರ ನೇತ್ರಾಲಯವು ಸಹಸ್ರಾರು ಜನರಿಗೆ ಚಿಕಿತ್ಸೆ-ಸಮಾಧಾನಗಳನ್ನು ಕೊಟ್ಟಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ನಾಲ್ಕು ದಶಕಗಳ ಒಡನಾಟ ಹೊಂದಿದ್ದ ಬದರೀನಾಥರು ಹೊ. ವೆ. ಶೇಷಾದ್ರಿ, ಸುದರ್ಶನಜೀ, ಪ್ರಸ್ತುತ ಸರಸಂಘಚಾಲಕರಾಗಿರುವ ಮೋಹನ ಭಾಗವತರು ಸೇರಿದಂತೆ ಎಲ್ಲ ಪ್ರಮುಖರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು” ಎಂದು ಸ್ಮರಿಸಿದ್ದಾರೆ.