ಮೈಸೂರಿನಲ್ಲಿ ‘ರನ್ ಫಾರ್ ನೇಷನ್, ರನ್ ಫಾರ್ ಮೋದಿ’ ಮ್ಯಾರಥಾನ್!

ಹೊಸದಿಗಂತ ವರದಿ, ಮೈಸೂರು:

ಮೈಸೂರು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸೋಮವಾರ ರನ್ ಫಾರ್ ನೇಷನ್, ರನ್ ಫಾರ್ ಮೋದಿ ಮ್ಯಾರಥಾನ್ ಓಟವನ್ನು ನಗರದಲ್ಲಿ ಆಯೋಜಿಸಲಾಗಿತ್ತು. ಮೈಸೂರಿನ ನ್ಯಾಯಾಲಯದ ಮುಂಭಾಗದಿoದ ಆರಂಭವಾದ ಓಟ ಎಂ ಜಿ ರೋಡ್ , ಆರ್ ಟಿ ಓ ರಾಮಸ್ವಾಮಿ ವೃತ್ತ, ಬಳಿಕ ಚಾಮರಾಜಪುರಂನಲ್ಲಿರುವ ಭಾರತೀಯ ಜನತಾ ಪಾರ್ಟಿಯ ಮುಂಭಾಗ ಕೊನೆಗೊಂಡಿತು.

ಬಿಜೆಪಿಯ ಕಾರ್ಯಕರ್ತರು ಹಾಗೂ ಮುಖಂಡರು ರನ್ ಫಾರ್ ನೇಷನ್, ರನ್ ಫಾರ್ ಮೋದಿ ಎನ್ನುವ, ಘೋಷಣೆ ಕೂಗುತ್ತಾ ಮ್ಯಾರಥಾನ್‌ನಲ್ಲಿ ಸಾಗಿದರು.

ಕಾರ್ಯಕ್ರಮಕ್ಕೆ ಚಾಲನಡ ನೀಡಿ ಮಾತನಾಡಿದ ಬಿಜೆಪಿ ನಗರ ಅಧ್ಯಕ್ಷರಾದ ಮಾಜಿ ಶಾಸಕ ಎಲ್ ನಾಗೇಂದ್ರ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಾರಿ ಶಕ್ತಿ ವಂದನ ಮೂಲಕ ಪ್ರತಿ ರಾಜ್ಯದಲ್ಲಿನ ಸ್ವಸಹಾಯ ಸಂಘಗಳಿಗೆ ನಗರ ಮತ್ತು ಗ್ರಾಮೀಣ ಭಾಗದ ಸ್ತ್ರೀಯರಿಗೆ (ನಗರಸಭೆ ಪುರಸಭೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ) ಕೇಂದ್ರದ ಹಲವಾರು ಯೋಜನೆಗಳನ್ನು ತಲುಪಿಸುವುದು ಹಾಗೂ ತಿಳುವಳಿಕೆ ಹೇಳುವ ಕಾರ್ಯಕ್ರಮವಾಗಿದೆ ಇದಾಗಿದೆ.

ಮೋದಿ ಅವರ ಹಲವಾರು ಯೋಜನೆಗಳು ಸ್ವಉದ್ಯೋಗ ಕೈಗೊಳ್ಳಲು ಸಹಕಾರಿಯಾಗಲಿದೆ. ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮೋದಿ ಅವರು ಮಹಿಳೆಯರ ಸಬಲೀಕರಿಕ್ಕಾಗಿ ಕೈಗೊಂಡಿರುವ ಯೋಜನೆಗಳನ್ನು ನಗರ ಹಾಗೂ ಗ್ರಾಮದ ಪ್ರತಿಯೊಬ್ಬ ಸ್ತ್ರೀಯರಿಗೂ ಮುಟ್ಟಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಟಿ ಎಸ್ ಶ್ರೀವತ್ಸ, ಚಿತ್ರ ನಟ ಹಾಗೂ ಮುಖಂಡ ಎಸ್.ಜಯಪ್ರಕಾಶ್ (ಜೆಪಿ) ಮಹಿಳಾ ಮೋರ್ಚಾ ಅಧ್ಯಕ್ಷ ರೇಣುಕಾ ರಾಜ್, ಮೈಸೂರು ನಗರ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಜಿ.ಗಿರಿಧರ್, ಕೇಬಲ್ ಮಹೇಶ್, ರಘು, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ಮಮತಾ ಶೆಟ್ಟಿ, ನಗರಪಾಲಿಕೆಯ ಮಾಜಿ ಉಪ ಮೇಯರ್ ಡಾ. ರೂಪ, ಮಾಜಿನಗರ ಪಾಲಿಕೆ ಸದಸ್ಯ ಪ್ರಮೀಳಾ ಭರತ್, ಲಕ್ಷ್ಮಿ ಕಿರಣ್ ಗೌಡ, ಸೌಭಾಗ್ಯ ಮೂರ್ತಿ, ಅಲ್ಪಸಂಖ್ಯಾತ ಮೋರ್ಚ ರಾಜ್ಯಾಧ್ಯಕ್ಷ ಡಾ. ಅನಿಲ್ ಥಾಮಸ್, ಚಾಮರಾಜನಗರ ಲೋಕಸಭೆ ಚುನಾವಣೆಯ ಉಸ್ತುವಾರಿ ಎನ್.ವಿ ಫಣೀಶ್ , ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಹಾಗೂ ಇನ್ನಿತರ ಮೋರ್ಚಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!