ದಿನಭವಿಷ್ಯ: ಹೆಚ್ಚು ಭಾವುಕತೆ ಇಂದು ನಿಮ್ಮನ್ನು ಕಾಡಲಿದೆ.. ಭಾವನೆಗಳ ಮೇಲೆ ಹಿಡಿತ ಇರಲಿ!

24-01-2022

ಮೇಷ :ನಿಮ್ಮ ಸುತ್ತ ಆಗುತ್ತಿರುವ ಬದಲಾವಣೆಗಳಿಗೆ ಕುರುಡಾಗದಿರಿ. ಅದನ್ನು ಗಮನಿಸಿ. ನೀವೂ ಅದಕ್ಕೆ ಹೊಂದಿಕೊಳ್ಳಿ. ಜಟಿಲ ನಿಲುವು ತಳೆಯುವುದು ಸೂಕ್ತವೆನಿಸದು.

ವೃಷಭ: ಕೆಲ ವಿಷಯಗಳಲ್ಲಿ ಇಂದು ನಿರಾಶೆ ಕಾಡಬಹುದು. ಕಾರ್ಯದಲ್ಲಿ ಪೂರ್ಣ ಫಲ ಸಿಗಲಾರದು. ಕೆಲವರಿಂದ ಟೀಕೆಗಳನ್ನೂ ಎದುರಿಸುವಿರಿ.

ಮಿಥುನ:ಹೆಚ್ಚು ಭಾವುಕರಾಗಿ ಇಂದು ವರ್ತಿಸವ ಸಾಧ್ಯತೆಯಿದೆ. ಭಾವನೆಗಳ ಮೇಲೆ ನಿಯಂತ್ರಣ ಹೇರಿ. ಮನಸ್ಸನ್ನು ಮುಕ್ತವಾಗಿ ತೆರೆದಿಡಿ.

ಕಟಕ:ಸಮಸ್ಯೆಯೊಂದು ಬಗೆಹರಿದರೂ ನಿಮಗೆ ಸಮಾಧಾನ ಉಂಟಾಗದು. ಮತ್ತೇನು ಬರುವುದೋ ಎಂಬ ಆತಂಕ. ದೇವರ ಸ್ಮರಣೆ ಮಾಡಿ, ನಿರಾಳರಾಗಿರಿ.

ಸಿಂಹ:ಕೆಲವು ಸಣ್ಣ ಘಟನೆಗಳೇ ಕೆಲವೊಮ್ಮೆ ದೊಡ್ಡ ಪಾಠ ಕಲಿಸುತ್ತವೆ. ಅಂತಹ ಪಾಠವೊಂದು ಇಂದು ನಿಮಗೆ ಉಂಟಾದೀತು. ಸಂಯಮದಿಂದ ವರ್ತಿಸುವುದು ಮುಖ್ಯ.

ಕನ್ಯಾ:ಎಂದಿನ ಏಕತಾನತೆ ಬಿಟ್ಟು ಹೊಸತನ ತುಂಬಿಕೊಳ್ಳಿರಿ. ನಿಂತ ನೀರಿನಂತಾಗದಿರಿ. ಮುಖ್ಯವಾಗಿ ನಿಮ್ಮ ಮನೋಭಾವದಲ್ಲಿ ಬದಲಾವಣೆ ಬರಲಿ.

ತುಲಾ:ನಿಮ್ಮ ಒಳ್ಳೆತನವನ್ನು ಕೆಲವರು ದುರುಪಯೋಗ ಮಾಡಿಕೊಳ್ಳುವರು. ಯೋಚಿಸಿ ನೆರವು ಚಾಚಿ. ಅಪಾತ್ರರಿಗೆ ಸಹಾನ ಅನವಶ್ಯ.

ವೃಶ್ಚಿಕ:ಕಠಿಣ ಮನಸ್ಥಿತಿ ಇಂದು ನಿಮ್ಮನ್ನು ಆವರಿಸುವುದು. ಕೋಪತಾಪದಿಂದ ರೇಗಬಹುದು. ಸಮಾಧಾನದಿಂದ ವರ್ತಿಸುವುದು ಒಳಿತು, ಸಂಘರ್ಷಕ್ಕೆ ಹೋಗದಿರಿ

ಧನು: ವಿವಾದಗಳನ್ನು ಸಂಧಾನದಿಂದ ಬಗೆಹರಿಸಲು ಯತ್ನಿಸಿ.  ಕಲಹಕ್ಕೆ ಇಳಿಯಬೇಡಿ. ಕುಟುಂಬಸ್ಥರಿಂದ ಸೂಕ್ತ ನೆರವು. ಆರ್ಥಿಕ ಒತ್ತಡ ಹೆಚ್ಚಬಹುದು.

ಮಕರ:ಸೋಲಿನಿಂದ ಗೆಲುವಿನೆಡೆ ಹೆಜ್ಜೆ ಇಡಲು ಆಶಾವಾದ ಅವಶ್ಯ . ನೀವಿಂದು ಪಾಲಿಸಬೇಕಾದುದು ಇದೇ ನೀತಿಯನ್ನು. ನಿರಾಶಾವಾದ ಬಿಡಿ.

ಕುಂಭ:ಇಂದು ನಿಮ್ಮ ಕಾರ್ಯಸಾಧನೆ ಕಠಿಣವೆನಿಸಬಹುದು. ಆದರೆ ಪ್ರಯತ್ನ ಬಿಡದಿರಿ. ಅಂತಿಮವಾಗಿ ಎಲ್ಲವೂ ನಿಮಗೆ ಪೂರಕ, ಕಾರ್ಯಸಿದ್ಧಿ.

ಮೀನ: ಕೆಲವು ಹೊಸ ಸವಾಲುಗಳು ಎದುರಾಗಬಹುದು. ಅದನ್ನು ಎದುರಿಸುವ ದಾರಿಯೂ ಗೋಚರಿಸುವುದು. ಚಿಂತೆ ಬೇಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!