ಡಾಲರ್ ಎದುರು ತುಸು ಚೇತರಿಸಿದ ರೂಪಾಯಿ: 12 ಪೈಸೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ 12 ಪೈಸೆ ಏರಿಕೆಯಾಗಿ 82.08 ಕ್ಕೆ ತಲುಪಿದೆ. ಅಮೆರಿಕದ ಫೆಡ್‌ ಬಡ್ಡಿದರಗಳನ್ನು ಹೆಚ್ಚಿಸಿದ ಪರಿಣಾಮ ಕಚ್ಚಾತೈಲ ಬೆಲೆಗಳಲ್ಲಿ ಕುಸಿತ ದೇಶೀಯ ಷೇರು ಮಾರುಕಟ್ಟೆಯ ಸಕಾರಾತ್ಮಕ ಪ್ರವೃತ್ತಿಗಳು ರುಪಾಯಿ ಚೇತರಿಕೆಗೆ ಬೆಂಬಲ ನೀಡಿದೆ.

ಅಂತರಬ್ಯಾಂಕ್ ವಿದೇಶಿ ವಿನಿಮಯದಲ್ಲಿ ದೇಶಿಯ ಕರೆನ್ಸು ಘಟಕವು ಡಾಲರ್ ವಿರುದ್ಧ 82.15 ನಲ್ಲಿ ಪ್ರಾರಂಭವಾಯಿತು ನಂತರ 82.08ರಲ್ಲಿ ಮುಕ್ತಾಯಗೊಂಡು ಹಿಂದಿನ ಮುಕ್ತಾಯಕ್ಕಿಂತ 12 ಪೈಸೆ ಏರಿಕೆ ದಾಖಲಿಸಿದೆ. ಗುರುವಾರದ ವಹಿವಾಟಿನಲ್ಲಿ ರುಪಾಯಿಯು ಡಾಲರ್‌ ವಿರುದ್ಧ 40 ಪೈಸೆ ಕುಸಿತವನ್ನು ಕಂಡಿತ್ತು.

ಏತನ್ಮಧ್ಯೆ ಆರು ಕರೆನ್ಸಿಗಳ ವಿರುದ್ಧ ಡಾಲರ್‌ ಬಲವನ್ನು ಅಳೆಯುವ ಸೂಚ್ಯಂಕವು ಶೇಕಡಾ 0.09 ರಷ್ಟು ಏರಿಕೆಯಾಗಿ 101.84 ಕ್ಕೆ ತಲುಪಿದೆ. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 0.10 ಶೇಕಡಾ ಇಳಿಕೆಯಾಗಿ ಪ್ರತಿಬ್ಯಾರಲ್‌ ಗೆ 82.09 ಡಾಲರ್‌ ಗೆ ತಲುಪಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!