ವಾಯುಪಡೆಗೆ ಸೇರ್ಪಡೆಗೊಂಡ 3 ರಫೇಲ್‌ ಯುದ್ಧ ವಿಮಾನಗಳು: ಇನ್ನು ಒಂದೇ ಬಾಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತ ಹಾಗೂ ಫ್ರಾನ್ಸ್‌ ನಡುವಿನ ರಫೇಲ್‌ ಒಪ್ಪಂದ ಕೊನೆಯ ಹಂತದಲ್ಲಿದ್ದು, ಭಾರತಕ್ಕೆ ಬರಬೇಕಿದ್ದ ಯುದ್ಧ ವಿಮಾನಗಳ ಪೈಕಿ 3 ಹೊಸ ರಫೇಲ್‌ ಜೆಟ್‌ ಭಾರತಕ್ಕೆ ಆಗಮಿಸಿವೆ.
2016ರಲ್ಲಿ ನಡೆದ ಈ ರಫೇಲ್‌ ಒಪ್ಪಂದದ ಪ್ರಕಾರ ಭಾರತಕ್ಕೆ ಫ್ರಾನ್ಸ್‌ 36 ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನಗಳು ಬರಬೇಕಿದೆ. ಈಗಾಗಲೇ 35 ವಿಮಾನಗಳು ಭಾರತೀಯ ವಾಯುನೆಲೆಗೆ ಸೇರ್ಪಡೆಗೊಂಡಿದ್ದು, ಇನ್ನೊಂದು ವಿಮಾನ ಸೇರ್ಪಡೆಯಾಗುವುದು ಬಾಕಿ ಇದೆ.
ಕೊನೆಯ ರಫೇಲ್‌ ಯುದ್ಧ ವಿಮಾನ ಕೂಡ ಮಾರ್ಚ್‌ ಅಥವಾ ಏಪ್ರಿಲ್‌ ನಲ್ಲಿ ಹಸ್ತಾಂತಗೊಳ್ಳುವ ಸಾಧ್ಯತೆ ಇದೆ.
ಈ ವಿಮಾನಗಳ ಸೇರ್ಪಡೆಯಿಂದ ಭಾರತೀಯ ಸೇನೆಯ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ದೊರಕಿದಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!