ರಷ್ಯ ಕದನವಿರಾಮ- ಸಂಘರ್ಷದಲ್ಲಿ ಸಿಲುಕಿದ ನಾಗರಿಕರ ‘ಸುರಕ್ಷತಾ ಕಾರಿಡಾರ್’ಗೆ ಅವಕಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಾಗರಿಕರಿಗೆ ಮಾನವೀಯ ಕಾರಿಡಾರ್‌ ಗಳನ್ನು ತೆರೆಯಲು ರಷ್ಯಾ ಕದನ ವಿರಾಮ ಘೋಷಿಸಿದೆ.
ಉಕ್ರೇನ್ ಮೇಲೆ ದಾಳಿ ಮಾಡಿ, ಪ್ರಮುಖ ನಗರಗಳನ್ನು ವಶಪಡಿಸಿಕೊಂಡು ರಾಜಧಾನಿ ಕೀವ್ ನಗರಕ್ಕೆ ಮುತ್ತಿಗೆ ಹಾಕಿರುವ ರಷ್ಯಾ ಸೇನೆ ಇಂದು ಕದನ ವಿರಾಮ ಘೋಷಣೆ ಮಾಡಿದೆ.

ಈ ಕದನ ವಿರಾಮ ಮುಖ್ಯವಾಗಿ ಮಾರಿಪೊಲ್ ಮತ್ತು ವೊಲ್ನವೊಕಾ ನಗರಗಳಿಗೆ ಸಂಬಂಧಿಸಿದ್ದಾಗಿದೆ. ಈ ನಗರಗಳನ್ನು ರಷ್ಯ ವಶಪಡಿಸಿಕೊಳ್ಳುವ ಹಂತದಲ್ಲಿದೆ.

ಮಾನವೀಯ ದೃಷ್ಟಿಯಿಂದ ಉಕ್ರೇನ್‌ ಮೇಲೆ ರಷ್ಯಾ ಕದನ ವಿರಾಮ ಘೋಷಣೆ ಮಾಡಿದೆ. ನಾಗರಿಕರಿಗೆ ಮಾನವೀಯ ಕಾರಿಡಾರ್‌ ಗಳನ್ನು ತೆರೆಯಲು ರಷ್ಯಾ ನಿರ್ಧರಿಸಿದೆ.
ರಷ್ಯಾ ಹಾಗೂ ಉಕ್ರೇನ್‌ ನಡುವೆ ಈಗಾಗಲೇ ಎರಡು ಸುತ್ತುಗಳ ಮಾತುಕತೆ ನಡೆದಿದ್ದು, ಈ ಕದನ ವಿರಾಮ ಎಷ್ಟು ಹೊತ್ತಿಗೆ ಹಾಗೂ ಎಷ್ಟು ದಿನಗಳವರೆಗೆ ಇರುತ್ತದೆ ಎಂಬುದರ ಬಗ್ಗೆ ರಷ್ಯ ಈವರೆಗೂ ಸ್ಪಷ್ಟಪಡಿಸಿಲ್ಲ.
ಪ್ರಸ್ತುತ ಉಕ್ರೇನ್​ನ ವಿವಿದೆಡೆಗಳಲ್ಲಿ 2 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
ರಷ್ಯಾ ಕದನ ವಿರಾಮ ಘೋಷಿಸಿದ ಕೂಡಲೇ ಭಾರತ ಸರ್ಕಾರ ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸುವ ನಿರೀಕ್ಷೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!