ಜಿ7 ರಾಷ್ಟ್ರಗಳನ್ನು ಹಣಿಯಲು ಭಾರತಕ್ಕೆ ಇನ್ನೂ ಕಡಿಮೆ ಬೆಲೆಯಲ್ಲಿ ತೈಲ ಆಫರ್‌ ಮಾಡಿದೆ ರಷ್ಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಷ್ಯಾ ಉಕ್ರೇನ್‌ ಸಂಘರ್ಷದ ಸಂದರ್ಭದಿಂದ ಯುರೋಪಿಯನ್‌ ರಾಷ್ಟ್ರಗಳು ಹಾಗೂ ರಷ್ಯಾದ ನಡುವೆ ತೈಲಖರೀದಿ ವಿಷಯದಲ್ಲಿ ತಿಕ್ಕಾಟಗಳು ನಡೆಯುತ್ತಲೇ ಇವೆ. ಮೊದಲಿಗೆ ರಷ್ಯಾದ ತೈಲವನ್ನು ನಿಲ್ಲಿಸುವುದಾಗಿ ಹೇಳಿದ್ದ ಯುರೋಪಿಯನ್‌ ರಾಷ್ಟ್ರಗಳು ಚಳಿಗಾಲ ಬರುತ್ತಿದ್ದಂತೆಯೇ ತಮ್ಮ ರಾಗ ಬದಲಿಸಿವೆ. ಆದರೆ ಇದೀಗ ಮತ್ತೆ ಜಿ7 ರಾಷ್ಟ್ರಗಳು ರಷ್ಯಾ ತೈಲ ಖರೀದಿಯನ್ನು ಮಿತಿಗೊಳಿಸುವಂತೆ ಒದರಾಡುತ್ತಿವೆ. ಇವರಿಬ್ಬರ ಈ ತಿಕ್ಕಾಟವು ಭಾರತದ ಪಾಲಿಗೆ ಲಾಭದಾಯಕವಾಗಿ ಪರಿಣಮಿಸಲಿದೆ.

ಏಕೆಂದರೆ ,ರಷ್ಯಾದಿಂದ ಕಚ್ಚಾ ತೈಲ ಆಮದುಗಳನ್ನು ಮಿತಿಗೊಳಿಸಲು G7 ರಾಷ್ಟ್ರಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುಕೆ ಮತ್ತು ಯುಎಸ್ ದೇಶಗಳು ಕೂಗು ಹಾಕುತ್ತಿರುವ ಬೆನ್ನಲ್ಲೇ ರಷ್ಯಾವು ಭಾರತಕ್ಕೆ ಮೊದಲಿಗಿಂತ ಕಡಿಮೆ ಬೆಲೆಯಲ್ಲಿ ಭಾರತಕ್ಕೆ ತೈಲವನ್ನು ನೀಡಲು ಸಿದ್ಧವಾಗಿದೆ ಎಂದು ನವದೆಹಲಿಗೆ ತಿಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

“ತಾತ್ವಿಕವಾಗಿ, ಭಾರತವು G7 ಪ್ರಸ್ತಾಪವನ್ನು ಬೆಂಬಲಿಸಬಾರದು ಎಂದು ಪ್ರತಿಯಾಗಿ ಕೇಳಲಾಗಿದೆ. ಎಲ್ಲಾ ಪಾಲುದಾರರೊಂದಿಗೆ ಮಾತುಕತೆಗಳು ಪ್ರಗತಿಯಲ್ಲಿರುವಾಗ ಈ ವಿಷಯದ ಬಗ್ಗೆ ನಿರ್ಧಾರವನ್ನು ನಂತರ ತೆಗೆದುಕೊಳ್ಳಲಾಗುವುದು” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ರಷ್ಯಾ ಮುಂದಿಟ್ಟಿರುವ ರಿಯಾಯಿತಿಗಳು ಕಳೆದ 2 ತಿಂಗಳುಗಳಲ್ಲಿ ಇರಾಕ್ ನೀಡಿದ್ದಕ್ಕಿಂತ ಹೆಚ್ಚಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ ತಿಂಗಳಲ್ಲಿ, ರಷ್ಯಾದ ಕಚ್ಚಾ ತೈಲವು ಭಾರತದ ಸರಾಸರಿ ಆಮದು ಬೆಲೆ 110ಡಾಲರ್‌ ಗಿಂತ 16 ಡಾಲರ್‌ ಕಡಿಮೆಯಾಗಿತ್ತು. ನಂತರ ಜೂನ್‌ ನಲ್ಲಿ ಸರಾಸರಿ ಆಮದು ಬೆಲೆ 116 ಡಾಲರ್‌ ಇದ್ದಾಗ 14 ಡಾಲರ್‌ ರಿಯಾಯಿತಿ ಸಿಕ್ಕಿತ್ತು. ಆಗಸ್ಟ್‌ ನಲ್ಲಿ 6 ಡಾಲರ್‌ ರಿಯಾಯಿತಿ ಸಿಕ್ಕಿತ್ತು.

ಪ್ರಸ್ತುತ ರಷ್ಯಾವು ಮತ್ತೊಮ್ಮೆ ಕಡಿಮೆ ಬೆಲೆಗೆ ಭಾರತಕ್ಕೆ ತನ್ನ ಕಚ್ಚಾ ತೈಲಗಳ ಆಫರ್‌ ನೀಡಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!