Thursday, September 29, 2022

Latest Posts

ಇಮ್ರಾನ್‌ ಖಾನ್‌ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ: ತುರ್ತು ಭೂಸ್ಪರ್ಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ತುರ್ತು ಭೂಸ್ಪರ್ಶ ಮಾಡಿದೆ. ಅಪಘಾತವಾಗಬೇಕಿದ್ದ ವಿಮಾನ ಕ್ಷಣಾರ್ಧದಲ್ಲಿ ಪಾರಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಇಮ್ರಾನ್ ಖಾನ್ ಶನಿವಾರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ವಿಶೇಷ ವಿಮಾನದ ಮೂಲಕ ಗುಜ್ರಾನ್‌ವಾಲಾಗೆ ತೆರಳುತ್ತಿದ್ದರು ಎಂದು ಸ್ಥಳೀಯ ಟಿವಿ ಚಾನೆಲ್‌ವೊಂದು ಹೇಳಿದೆ.

ವಿಮಾನದ ಪೈಲಟ್ ಚಾಕಚಕ್ಯತೆಯಿಂದ ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು. ತುರ್ತು ಭೂಸ್ಪರ್ಶದ ನಂತರ ಖಾನ್ ರಸ್ತೆಯ ಮೂಲಕ ಗುಜ್ರಾನ್‌ವಾಲಾಗೆ ಪ್ರಯಾಣವನ್ನು ಮುಂದುವರೆಸಿದರು. ಪಿಟಿಐ ನಾಯಕ ಅಜರ್ ಮಶ್ವಾನಿ ಮಾತನಾಡಿ ಕೆಟ್ಟ ಹವಾಮಾನದಿಂದಾಗಿ ಖಾನ್ ಅವರ ವಿಮಾನ ಟೇಕ್ ಆಫ್ ಆದ ಕೂಡಲೇ ಇಸ್ಲಾಮಾಬಾದ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ತಾಂತ್ರಿಕ ದೋಷದಿಂದಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!