ಟಚ್‌ ಮಾಡಿದ್ರೆ ನೀವು ಉಡೀಸ್…ಮತ್ತೊಂದು ಕ್ಷಿಪಣಿ ಪ್ರಯೋಗಿಸಿ ಪುಟಿನ್ ಖಡಕ್‌ ವಾರ್ನಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾ ಜಗತ್ತಿನ ರಾಷ್ಟ್ರಗಳಿಗೆ ಮತ್ತೊಂದು ಸಂದೇಶವನ್ನು ನೀಡಿದೆ. ಯಾವುದೇ ಕಾರಣಕ್ಕೂ ಇತರೆ ದೇಶಗಳ ಬೆದರಿಕೆಗಳಿಗೆ, ನಿರ್ಬಂಧಗಳಿಗೆ ಬಗ್ಗುವುದಿಲ್ಲ ಎಂಬ ಸಂದೇಶವನ್ನು ನೀಡುತ್ತಾ. ಮತ್ತೊಂದು ಶಕ್ತಿಶಾಲಿ ಕ್ಷಿಪಣಿಯ ಪ್ರಯೋಗ ಮಾಡಿ ವಿಶ್ವದ ಗಮನ ಸೆಳೆದಿದೆ.

ರಷ್ಯಾ ಮೊಟ್ಟಮೊದಲ ಬಾರಿಗೆ ಪರಮಾಣು ಸಾಮರ್ಥ್ಯದ ಸರ್ಮತ್ ಖಂಡಾಂತರ ಕ್ಷಿಪಣಿಯನ್ನು ಉಡಾವಣೆ ಮಾಡಿದೆ ಕ್ಷಿಪಣಿ ಉಡಾವಣೆಯ ನಂತರ, ಉಕ್ರೇನ್‌ ಬಿರುದ್ಧ ಯುದ್ಧದಲ್ಲಿ ರಷ್ಯಾವನನು ಯಾರೂ ಬೆದರಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ. ಸರ್ಮತ್ ಸೂಪರ್ ಹೆವಿ ಖಂಡಾಂತರ ಕ್ಷಿಪಣಿಯನ್ನು ಪಾಶ್ಚಾತ್ಯ ವಿಶ್ಲೇಷಕರು ಸೈತಾನ್- 2 ಎಂದು ಕರೆದಿದ್ದಾರೆ.

ರಷ್ಯಾ ಈ ಹಿಂದೆ ಇದೇ ರೀತಿಯ ಕಿಂಜಾಲ್ ಮತ್ತು ಅವಂಗಾರ್ಡ್ ಹೈಪರ್ಸಾನಿಕ್ ಕ್ಷಿಪಣಿಗಳನ್ನು ಉಡಾವಣೆ ಮಾಡಿತ್ತು. ಉಕ್ರೇನ್ ವಿರುದ್ಧದ ಆಕ್ರಮಣದ ಸಮಯದಲ್ಲಿ ರಷ್ಯಾ ಮೊದಲ ಬಾರಿಗೆ ಕಿನ್ಜೆಲ್ ಕ್ಷಿಪಣಿಯನ್ನು ಉಡಾಯಿಸಿತು. ಸರ್ಮತ್ ಕ್ಷಿಪಣಿಯ ಯಶಸ್ವಿ ಉಡಾವಣೆ ನಂತರ ಕ್ಷಿಪಣಿಯನ್ನು ವಿನ್ಯಾಸಗೊಳಿಸಿದ ವಿಜ್ಞಾನಿಗಳನ್ನು ಪುಟಿನ್ ಅಭಿನಂದಿಸಿ, ಅದರ ಭಾಗವಾಗಿ ಪುಟಿನ್ ಜಗತ್ತಿಗೆ ಪ್ರಮುಖ ಎಚ್ಚರಿಕೆಗಳನ್ನು ನೀಡಿದ್ದಾರೆ.

ರಷ್ಯಾ ಉಡಾವಣೆ ಮಾಡಿರುವ ಈ ಖಂಡಾಂತರ ಕ್ಷಿಪಣಿ ಅತ್ಯಂತ ಶಕ್ತಿಶಾಲಿ ಕ್ಷಿಪಣಿಯಾಗಿದೆ. ಇದು ರಷ್ಯಾದ ಕೈಯಲ್ಲಿರುವ ಬ್ರಹ್ಮಾಸ್ತ್ರ, ತನ್ನ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬಹುದು ಎಂದು ಪುಟಿನ್‌ ಹೇಳಿಕೊಂಡಿದ್ದಾರೆ. ಯಾರಾದರೂ ರಷ್ಯಾ ಮೇಲೆ ದಾಳಿ ಮಾಡುವ ಮೊದಲು ಹತ್ತು ಬಾರಿ ಯೋಚಿಸಿ ಎಂದು ಪುಟಿನ್ ಶತ್ರುಗಳಿಗೆ ಎಚ್ಚರಿಕೆ ನೀಡಿದರು.

200 ಟನ್ ತೂಕದ ಸರ್ಮತ್ ಸೂಪರ್ ಹೆವಿ ಕ್ಷಿಪಣಿಯು ನೆಲದ ಮೇಲಿನ ಯಾವುದೇ ಗುರಿಯನ್ನು ಕೆಲವೇ ಸೆಕೆಂಡುಗಳಲ್ಲಿ ಹೊಡೆಯಬಲ್ಲದು ಎಂದು ರಷ್ಯಾದ ರಕ್ಷಣಾ ವ್ಯವಸ್ಥೆ ಹೇಳಿದೆ. ಈ ಪ್ರಯೋಗದಿಂದ ರಷ್ಯಾದ ಪರಮಾಣು ಅಸ್ತ್ರ ವ್ಯವಸ್ಥೆ ಹೆಚ್ಚು ಶಕ್ತಿಶಾಲಿಯಾಗುತ್ತಿದೆ. ಸರ್ಮತ್ ಕ್ಷಿಪಣಿಯನ್ನು ಶತ್ರು ರಾಷ್ಟ್ರಗಳು ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!