ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಅಮಾನತು: ಮತದಾನದಿಂದ ದೂರ ಉಳಿದ ಭಾರತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಉಕ್ರೇನ್‌ನ ಬುಚಾದಲ್ಲಿ ನಡೆದ ಹತ್ಯೆಗಳ ಬಳಿಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ರಷ್ಯಾವನ್ನು ಮಾನವ ಹಕ್ಕುಗಳ ಮಂಡಳಿಯಿಂದ ಅಮಾನತುಗೊಳಿಸಿದೆ.
ಅಮೆರಿಕ​​​ ಮಂಡಿಸಿದ ಈ ನಿರ್ಣಯದ ಪರ 93 ಮತಗಳು ಬಂದಿದ್ದು, 24 ದೇಶಗಳು ವಿರುದ್ಧವಾಗಿ ಮತ ಚಲಾಯಿಸಿವೆ. 58 ದೇಶಗಳು ಇದರಿಂದ ದೂರವೇ ಉಳಿದಿದ್ದವು. ಭಾರತವು ಕೂಡ ಮತದಾನದಿಂದ ದೂರ ಉಳಿದಿದೆ. ಈ ಮೂಲಕ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಲಿಯಿಂದ ರಷ್ಯಾವನ್ನು ಅಮಾನತುಗೊಳಿಸಲು ಅಗತ್ಯವಿರುವ ಮೂರನೇ ಎರಡರಷ್ಟು ಮತ ದೊರೆತಿತ್ತು.
ಕೀವ್ ಸುತ್ತಮುತ್ತಲಿನ ಬುಚಾ ಮತ್ತು ಇತರ ಪಟ್ಟಣಗಳಲ್ಲಿ ನಡೆದ ನಾಗರಿಕರ ಹತ್ಯೆಗೆ ರಷ್ಯಾ ಕಾರಣ ಎಂದು ಉಕ್ರೇನ್ ಆರೋಪಿಸಿದೆ. ಆದ್ರೆ ಇದನ್ನು ಮಾಸ್ಕೋ ನಿರಾಕರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!