Wednesday, June 29, 2022

Latest Posts

ಮಧ್ಯಪ್ರಾಚ್ಯದಲ್ಲಿ ಆಹಾರ ಹಾಹಾಕಾರಕ್ಕೆ ಕಾರಣವಾಗಲಿದೆಯೇ ಉಕ್ರೇನ್ ಕದನ?

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಅಮೆರಿಕ ಮತ್ತು ಯುರೋಪಿನ ರಾಷ್ಟ್ರಗಳೇನೋ ತಾವು ಹೇರುತ್ತಿರುವ ನಿರ್ಬಂಧಗಳು ರಷ್ಯ ದೇಶದ ಅರ್ಥವ್ಯವಸ್ಥೆಯನ್ನೇ ಅಡ್ಡಡ್ಡ ಮಲಗಿಸಲಿವೆ ಎಂದು ಬೀಗಿಕೊಂಡಿವೆ. ಆದರೆ ನಿಜವಾಗಿ ಬೆಲೆ ತೆರುತ್ತಿರುವವರು ಯಾರು?

ರಷ್ಯ ಮತ್ತು ಉಕ್ರೇನ್ ಎರಡೂ ಸೇರಿ ಜಗತ್ತಿನ ಗೋದಿ ಬೇಡಿಕೆಯನ್ನು ದೊಡ್ಡಮಟ್ಟದಲ್ಲಿ ಪೂರೈಸುತ್ತಿದ್ದವು. ಈಗ ಉಕ್ರೇನ್ ರಷ್ಯದಿಂದ ಆಕ್ರಮಣಕ್ಕೆ ಒಳಗಾಗಿ ಕೃಷಿ ಮಾಡದ ಸ್ಥಿತಿಯಲ್ಲಿದ್ದರೆ, ರಷ್ಯ ನಿರ್ಬಂಧಗಳ ಹೊಡೆತಕ್ಕೆ ಸಿಕ್ಕಿದೆ.

ಮುಖ್ಯವಾಗಿ ಈಜಿಪ್ತ್ ಸೇರಿದಂತೆ ಮಧ್ಯಪ್ರಾಚ್ಯದ ದೇಶಗಳ ನಿತ್ಯ ಆಹಾರವಾದ ಬ್ರೆಡ್ ಗೆ ಗೋದಿ ಸರಬರಾಜಾಗುವುದು ರಷ್ಯ ಮತ್ತು ಉಕ್ರೇನ್ ಗಳಿಂದಲೇ ಆಗಿತ್ತು. ಈಜಿಪ್ತ್ ತನ್ನ ಶೇ. 85 ಗೋದಿ ಪೂರೈಕೆ ಹಾಗೂ ಶೇ. 73 ಸೂರ್ಯಕಾಂತಿ ಎಣ್ಣೆ ಪೂರೈಕೆಗೆ ರಷ್ಯ ಮತ್ತು ಉಕ್ರೇನ್ ಗಳನ್ನೇ ಆತುಕೊಂಡಿದೆ. ಅದಾಗಲೇ ಅಲ್ಲಿ ಆಹಾರ ಬೆಲೆ ಹೆಚ್ಚಾಗುತ್ತಿದ್ದು ಜನ ಇನ್ನು ಸಿಗದೇನೋ ಎಂಬಂತೆ ಗಾಬರಿಯ ಖರೀದಿಗೆ ತೊಡಗಿದ್ದಾರೆ.

ಲೆಬನಾನ್ ತನ್ನ ಶೇ. 80ರಷ್ಟು ಗೋದಿ ಪೂರೈಕೆಗೆ ಆತುಕೊಂಡಿರುವುದು ರಷ್ಯ ಮತ್ತು ಉಕ್ರೇನ್ ಗಳನ್ನೇ.

ಒಟ್ಟಾರೆ ಮಧ್ಯಪ್ರಾಚ್ಯದ ಮತ್ತು ಆಫ್ರಿಕಾಗಳ ಶೇ. 40ರಷ್ಟು ಗೋದಿ ಪೂರೈಕೆ ಆಗುವುದು ರಷ್ಯ ಮತ್ತು ಉಕ್ರೇನ್ ಗಳಿಂದಲೇ. ಇಲ್ಲೆಲ್ಲ ಸೃಷ್ಟಿಯಾಗಲಿರುವ ಆಹಾರದ ಹಾಹಾಕಾರ ಅಂತರ್ಯುದ್ಧಗಳನ್ನೇ ಸೃಷ್ಟಿಸಲಿದೆ ಎಂದು ವಿಷಯ ಪರಿಣತರು ಭವಿಷ್ಯ ನುಡಿಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss