ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್ ಸಂಘರ್ಷದ ವಿಷಯದಲ್ಲಿ ತಾರತಮ್ಯ ತೋರಿಸಿದೆ ಎಂಬ ಆರೋಪದ ಮೇಲೆ ರಷ್ಯಾದ ಮಾಧ್ಯಮ ನಿಯಂತ್ರಕ ಸಂಸ್ಥೆ ಫೇಸ್ ಬುಕ್ ಹಾಗೂ ಟ್ವಿಟರ್ ಮೇಲೆ ನಿಷೇಧ ಹೇರಿದೆ.
ರಷ್ಯಾದ ಮಾಧ್ಯಮಗಳ ಮೇಲೆ ಫೇಸ್ ಬುಕ್ ಹಾಗೂ ಟ್ವಿಟರ್ ರಷ್ಯಾದ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿತ್ತು. ಈ ನಡೆಯನ್ನು ಖಂಡಿಸಿದ ರಷ್ಯಾ ಈಗ ಈ ನಿರ್ಬಂಧ ಹೇರಿದೆ. ಫೇಸ್ ಬುಕ್, ಟ್ವಿಟರ್ ಹೊರತು ಪಡಿಸಿ, ಬಿಬಿಸಿ, ಆಪಲ್, ಗೂಗಲ್ ಆಪ್ ಸ್ಟೋರ್ ಮೇಲೆ ಕೂಡ ನಿರ್ಬಂಧ ವಿಧಿಸಿದೆ.
ಪ್ರಸ್ತುತ ರಷ್ಯಾ ಸರ್ಕಾರ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ನಕಲಿ ಸುದ್ದಿಗಳಿಗೆ ಕಡಿವಾಣ ಹಾಕಿದೆ. ರಷ್ಯಾ ಸೇನೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬಿದವರಿಗೆ 15 ವರ್ಷಗಳವರೆಗೆ ಜೈಲುಶಿಕ್ಷೆ ವಿಧಿಸುವ ಬಗ್ಗೆ ಪುಟಿನ್ ಆದೇಶಿಸಿದ್ದಾರೆ.