ಯುದ್ಧದ ಕುರಿತು ಕೇಳಿ ಬರುತ್ತಿದೆ ವಿರೋಧ: ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ ರಷ್ಯಾ!

ಹೊಸದಿಗಂತ ಡಿಟಿಟಲ್ ಡೆಸ್ಕ್:

ಉಕ್ರೇನ್ ಮೇಲಿನ ದಾಳಿಯ ಕುರಿತು ರಷ್ಯಾ ವಿರುದ್ಧ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಉಕ್ರೇನ್ ನ ಸ್ಥಳೀಯ ಮಾಧ್ಯಮಗಳಿಗೆ ರಷ್ಯಾ ಎಚ್ಚರಿಕೆ ನೀಡಿದೆ.
ಶನಿವಾರ ರಷ್ಯಾದ ಕಮ್ಯೂನಿಕೇಷನ್ ರೆಗ್ಯೂಲೇಟರ್ ಸಂಸ್ಥೆ, ರೇಸ್ಕೋಮ್ನಾಡ್ಜೋರ್ ಸೇರಿ ಹತ್ತು ಹಲವು ಮಾಧ್ಯಮಗಳಿಗೆ ರಷ್ಯಾ ಖಡಕ್ ವಾರ್ನಿಂಗ್ ಕೊಟ್ಟಿದೆ.
ಉಕ್ರೇನ್ ನಲ್ಲಿನ ರಷ್ಯಾದ ಯುದ್ಧದ ಕಾರ್ಯಾಚರಣೆ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿದೆ.
ಉಕ್ರೇನ್ ಮೇಲಿನ ದಾಳಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ 2490 ಜನರನ್ನು ರಷ್ಯಾ ಬಂಧಿಸಿದೆ.
ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಉಕ್ರೇನ್ ಕೂಡ ದಾಳಿಯನ್ನು ನಡೆಸುತ್ತಿದೆ. ಇದುವರೆಗೆ 3,500ಕ್ಕೂ ಹೆಚ್ಚು ರಷ್ಯಾ ಸೈನಿಕರನ್ನು ಉಕ್ರೇನ್ ಹೊಡೆದುರುಳಿಸಿರೋದಾಗಿ ತಿಳಿಸಿದೆ.ಜೊತೆಗೆ 102 ಯುದ್ಧ ಟ್ಯಾಂಕರ್, 8 ಹೆಲಿಕ್ಯಾಪ್ಟರ್, 536 ವಾಹನಗಳು ಉಕ್ರೇನ್ ಧ್ವಂಸ ಮಾಡಿರೋದಾಗಿ ಹೇಳಿಕೊಂಡಿದೆ.ಇದರ ಜೊತೆಗೆ 200 ರಷ್ಯಾ ಸೈನಿಕರನ್ನು ಬಂಧಿಸಿರೋದಾಗಿ ಹೇಳಿಕೊಂಡಿದೆ.
ರಷ್ಯಾ ಉಕ್ರೇನ್ ಮೇಲೆ ಫೆ.24 ರಂದು ಆಕ್ರಮಣ ಪ್ರಾರಂಭಿಸಿದ್ದು, ಈಗಾಗಲೇ ಸಾವಿರಾರು ಮಂದಿ ರಷ್ಯಾ ದಾಳಿಗೆ ಬಲಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!