August 31, 2026
Monday, August 31, 2026
spot_img

ನೇಪಾಳದ ಸ್ಥಿತಿಗೆ ಮರುಗಿದ ಸದ್ಗುರು : ಪ್ರಧಾನಿ ವಿಪತ್ತು ನಿಧಿಗೆ ಒಂದು ಕೋಟಿ ರೂ. ನೀಡುವುದಾಗಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನೇಪಾಳ ಟಿಬೆಟ್‌ ಗಡಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 900ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಈಶಾ ಫೌಂಡೇಷನ್‌ನ ಎಂಬತ್ತು ಮಂದಿ ಕಾಣೆಯಾಗಿರುವ ಸುದ್ದಿಯನ್ನು ಅಧ್ಯಾತ್ಮಿಕ ಗುರು ಸದ್ಗುರು ಮಾಧ್ಯಮದ ಮುಂದೆ ಹಂಚಿಕೊಂಡು ಭಾವುಕರಾಗಿದ್ದರು. ಇದೀಗ ನೇಪಾಳ ಪ್ರಧಾನಿ ವಿಪತ್ತು ನಿಧಿಗೆ ಒಂದು ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದಾರೆ.

ಕಠ್ಮಂಡುವಿನಲ್ಲಿ ನಡೆದ In Solidarity with Nepal ಕಾರ್ಯಕ್ರಮದಲ್ಲಿ ಮಾತನಾಡಿ, ನೇಪಾಳದಲ್ಲಿ ಮೃತಪಟ್ಟ, ಮೃತರ ಕುಟುಂಬಗಳು, ಜೀವನ ಕಳೆದುಕೊಂಡವರ ನೋವು ನನಗೆ ಅರ್ಥವಾಗುತ್ತದೆ ಎಂದಿದ್ದಾರೆ. ಹಿಮಾಲಯಕ್ಕೆ ಯಾವುದೇ ರಾಜಕೀಯ ಗಡಿಗಳಿಲ್ಲ. ಕಷ್ಟದ ಸಮಯದಲ್ಲಿ ಹಿಮಾಲಯ ರಾಷ್ಟ್ರಗಳು ಹೆಚ್ಚು ಸಹಕಾರ ನೀಡಬೇಕು. ನಮ್ಮ ಈಶಾ ಸೇಕ್ರೆಡ್‌ ವಾಕ್ಸ್‌ ಕೈಶಾಸ್‌ ಸೋರ್ಜನ್‌ನಲ್ಲಿ ಭಾಗಿಯಾಗಿದ್ದ 77 ಮಂದಿ ನಾಪತ್ತೆಯಾಗಿದ್ದಾರೆ. ಇನ್ನು ಮೂವರು ಈಶಾ ಸ್ವಯಂಸೇವಕರು ಕೂಡ ನೇಪಾಳದ ಇನ್ನೊಂದು ಬದಿಯಲ್ಲಿ ಸಿಲುಕಿಕೊಂಡಿದ್ದಾರೆ. ನನ್ನ ಮನಸ್ಸು ಮರುಗುತ್ತಿದೆ. ಅಲ್ಲಿರುವ ಜನರಿಗೆ ಅನ್ನ ಆಶ್ರಯಕ್ಕಾಗಿ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.

ವಿಪತ್ತಿನ ಸಂದರ್ಭದಲ್ಲಿ ಭಾರತ, ಚೀನಾ, ಪಾಕಿಸ್ತಾನ, ನೇಪಾಳ ಹಾಗೂ ಭೂತಾನ್‌ ರಾಷ್ಟ್ರಗಳಿರುವ ಹಿಮಾಲಯನ್‌ ಮಂಡಳಿಯನ್ನು ರಚನೆ ಮಾಡಬೇಕು. ಕೆಲವು ಕರ್ತವ್ಯಗಳನ್ನು ಕೆಲವು ದೇಶಗಳು ವಹಿಸಿಕೊಂಡು ಕಾರ್ಯನಿರ್ವಹಿಸಬೇಕು. ಕಷ್ಟದ ಸಮಯದಲ್ಲಿ ಎಲ್ಲರೂ ಇನ್ನಷ್ಟು ಸಹಕಾರ ನೀಡಬೇಕು. ಹಿಮಾಲಯದ ಪರ್ವತಗಳಿಗೆ ನಿಮ್ಮ ರಾಜಕೀಯ ಸಂಬಂಧ ತಿಳಿದಿಲ್ಲ, ನೀವು ಯಾವ ಭಾಷೆ ಮಾತನಾಡುತ್ತೀರೋ ಗೊತ್ತಿಲ್ಲ ಎಂದಿದ್ದಾರೆ.

ನೇಪಾಳ ಟಿಬೆಟ್‌ ಗಡಿಯಲ್ಲಿ ಸಂಭವಿಸಿದ ಹಠಾತ್‌ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 903 ಕ್ಕೆ ಏರಿಕೆಯಾಗಿದೆ. ಇನ್ನೂ 4,247ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !