ಜೀವ ಬೆದರಿಕೆ ಬೆನ್ನಲ್ಲೇ ಸಲ್ಮಾನ್‌ ಖಾನ್‌, ತಂದೆ ಸಲೀಂ ಖಾನ್‌ಗೆ ಹೆಚ್ಚಿದ ಭದ್ರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ನಟ ಸಲ್ಮಾನ್‌ ಖಾನ್ ಮತ್ತು ಅವರ ತಂದೆಗೆ ಬೆದರಿಕೆ ಪತ್ರ ರವಾನೆಯಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಗೃಹ ವ್ಯವಹಾರಗಳ ಇಲಾಖೆ ನಟ ಸಲ್ಮಾನ್ ಖಾನ್‌ಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿದೆ. ನಿನ್ನೆ (ಜೂನ್ 5)ರಂದು ಸಲ್ಮಾನ್‌ ಖಾನ್ ಹಾಗೂ ಆತನ ತಂದೆ ಸಲೀಂ ಖಾನ್‌ಗೆ ಬೆದರಿಕೆ ಪತ್ರ ಕಳುಹಿಸಲಾಗಿತ್ತು.‌ ಈ ಹಿನ್ನೆಲೆ ಇಂದು ಮುಂಬೈ ಕ್ರೈಂ ಬ್ರಾಂಚ್‌ ತಂಡ ನಟ ಸಲ್ಮಾನ್‌ ಖಾನ್‌ರನ್ನು ಭೇಟಿಯಾಗಿ ಭದ್ರತೆ ಬಗ್ಗೆ ಚರ್ಚಿಸಿದ್ದಾರೆ.

ಪೊಲೀಸರ ಪ್ರಕಾರ ಸಲೀಂ ಖಾನ್ ಅವರು ಮುಂಬೈನ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್ ವಾಯುವಿಹಾರದ ಬಳಿ ಬೆಳಿಗ್ಗೆ ಜಾಗಿಂಗ್ ಮಾಡಿದ ನಂತರ ಅವರು ಕುಳಿತುಕೊಳ್ಳುವ ಬೆಂಚ್‌ ಬಳಿ ಸಹಿ ಮಾಡದ ಬೆದರಿಕೆ ಪತ್ರ ಸಿಕ್ಕಿದೆ. ಕೂಡಲೇ ಬಾಂದ್ರಾ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!