ಸ್ವದೇಶಿ ಗನ್‌ಗಳಿಂದ ಸೆಲ್ಯೂಟ್: ಈ ಬಾರಿ ಗಣರಾಜ್ಯೋತ್ಸವ ಸಂಪೂರ್ಣವಾಗಿ ‘ಮೇಡ್ ಇನ್ ಇಂಡಿಯಾ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ 74 ವರ್ಷಗಳಿಂದ ನಡೆದು ಬಂದ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದು, ಈ ಬಾರಿ ಗಣರಾಜ್ಯೋತ್ಸವದ ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಆಗಿರಲಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇದೇ ಮೊದಲ ಬಾರಿಗೆ ಸ್ವದೇಶಿ ಗನ್‌ಗಳಿಂದ ಸೆಲ್ಯೂಟ್ ಸಿಗಲಿದೆ. ಇಷ್ಟು ವರ್ಷಗಳು ಬ್ರಿಟಿಷರ ಕಾಲದ 25 ಪೌಂಡರ್ ಗನ್‌ಗಳನ್ನು ಭಾರತೀಯ ಸೇನೆ ಬಳಸುತ್ತಿತ್ತು. ಆದರೆ ಈ ಬಾರಿ ಸಂಪ್ರದಾಯವನ್ನು ಮುರಿದಿದ್ದು, ಸ್ವದೇಶಿ ಗನ್‌ಗಳನ್ನು ಬಳಸಲಾಗುತ್ತದೆ.

ಭಾರತದಲ್ಲಿಯೇ ತಯಾರಾದ ಫೀಲ್ಡ್ ಗನ್‌ಗಳಾದ ಎಂಎಂ ಗನ್‌ಗಳನ್ನು ಬಳಸಿ ರಾಷ್ಟ್ರಪತಿಗಳಿಗೆ ಸೆಲ್ಯೂಟ್ ಮಾಡಲಾಗುತ್ತದೆ. ನಮ್ಮೆಲ್ಲಾ ಆಯುಧಗಳು ಸಂಪೂರ್ಣ ಸ್ವದೇಶಿ ನಿರ್ಮಿತ ಆಗುವ ದಿನ ದೂರ ಇಲ್ಲ ಎಂದು ಸೇನೆಯ ದೆಹಲಿ ವಿಭಾಗದ ಸಿಬ್ಬಂದಿ ಮುಖ್ಯಸ್ಥ ಮೇಜರ್ ಜನರಲ್ ಭವಾನಿ ಕುಮಾರ್ ಮಾಹಿತಿ ನೀಡಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!