ಹಗ್ಗ ಮತ್ತು ಡ್ಯೂಪ್ ಇಲ್ಲದೆ ಫೈಟ್ ಮಾಡಿ ಸಾಕಷ್ಟು ಹೊಡೆತ ತಿಂದಿದ್ದೇನೆ: ಸಮಂತಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಹರಿ ಹರೀಶ್ ನಿರ್ದೇಶನದಲ್ಲಿ ಸಮಂತಾ ನಾಯಕಿಯಾಗಿ ಯಶೋದಾ ಚಿತ್ರ ತೆರೆಗೆ ಬರಲಿದೆ. ಶ್ರೀದೇವಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಶಿವಲೆಂಕ ಕೃಷ್ಣಪ್ರಸಾದ್ ಈ ಚಿತ್ರವನ್ನು ಪ್ಯಾನ್ ಇಂಡಿಯಾ ಚಿತ್ರವಾಗಿ ನಿರ್ಮಿಸಿದ್ದಾರೆ. ಯಶೋದಾ ಸಿನಿಮಾ ಈ ನವೆಂಬರ್ 11 ರಂದು ಭಾರತದಾದ್ಯಂತ ಬಿಡುಗಡೆಯಾಗಲಿದೆ.

ಆದರೆ ಸಮಂತಾ ಮಯೋಸೈಟಿಸ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಚಿತ್ರದ ಬಿಡುಗಡೆ ಸಮಯ ಹತ್ತಿರವಾಗುತ್ತಿದ್ದಂತೆ ಸಮಂತಾ ಪ್ರಚಾರ ಆರಂಭಿಸಿದ್ದಾರೆ.

ಯಶೋದಾ ಚಿತ್ರದ ಪ್ರಚಾರದ ಭಾಗವಾಗಿ ಸಮಂತಾ ಆ್ಯಂಕರ್ ಸುಮಾ ಅವರಿಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಈ ಸಂದರ್ಶನದಲ್ಲಿ ಸಿನಿಮಾ ಮತ್ತು ತಮ್ಮ ಅನಾರೋಗ್ಯದ ಬಗ್ಗೆ ಹಲವು ವಿಷಯಗಳನ್ನು ಹೇಳಿದ್ದಾರೆ. ಯಶೋದಾ ಸಿನಿಮಾದ ಸಾಹಸ ದೃಶ್ಯಗಳ ಕುರಿತು ಮಾತನಾಡಿದ ಸಮಂತಾ, ‘ಈ ಸಿನಿಮಾದಲ್ಲಿ ಸಾಕಷ್ಟು ಸಾಹಸ ದೃಶ್ಯಗಳಿವೆ. ಬಹುತೇಕ ಫೈಟ್‌ಗಳನ್ನು ಹಗ್ಗ ಮತ್ತು ಡ್ಯೂಪ್‌ಗಳಿಲ್ಲದೆ ಮಾಡಲಾಗಿದೆ. ಹೊಡೆತಗಳೂ ಕೂಡಾ ಬಿದ್ದಿವೆ. ಒಮ್ಮೆ ಮುಖ ಊದಿಕೊಂಡು ಅರ್ಧ ಗಂಟೆಯಾದರೂ ಕಡಿಮೆಯಾಗಿರಲಿಲ್ಲ.  ಕ್ಲೈಮ್ಯಾಕ್ಸ್‌ನಲ್ಲಿ ಸಂಪೂರ್ಣ ಸಾಹಸ ದೃಶ್ಯಗಳಿವೆ. ನಾನು ಫೈಟ್‌ ಮಾಡಲು ಶ್ರಮಿಸಿದ್ದೇನೆ. ಫೈಟ್ ಮಾಸ್ಟರ್ಸ್ ಕೂಡ ಅದ್ಭುತವಾಗಿ ಫೈಟ್ ಡಿಸೈನ್ ಮಾಡಿದ್ದಾರೆ ಎಂದರು. ಸಿನಿಮಾ ಬಗ್ಗೆ ಸಮಂತಾ ಹೇಳುತ್ತಿದ್ದಂತೆ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!