ಹೊಸದಿಗಂತ ಡಿಜಿಟಲ್ ಡೆಸ್ಕ್:
LPG ಬುಕ್ಕಿಂಗ್ ನಲ್ಲಿ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆ ತರಲು ಮುಂದಾಗಿದೆ.
ಇನ್ಮುಂದೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ಗ್ರಾಹಕರಿಗೆ LPG ಸಿಲಿಂಡರ್ ರೀಫಿಲ್ ಬುಕ್ ಮಾಡಲು ಒಂದೇ ರೀತಿಯ 25 ದಿನಗಳ ಅಂತರವನ್ನು ಜಾರಿಗೆ ತರಲು ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) ಸೂಚಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಸುರೇಶ್ ಗೋಪಿ ತಿಳಿಸಿದ್ದಾರೆ.
LPG ಪೂರೈಕೆ ಪರಿಸ್ಥಿತಿಯಲ್ಲಿ ಸುಧಾರಣೆ
ಮಧ್ಯಪ್ರಾಚ್ಯದ ಯುದ್ಧದ ಹಿನ್ನೆಲೆಯಲ್ಲಿ LPG ಪೂರೈಕೆಯ ಮೇಲೆ ಒತ್ತಡ ಹೆಚ್ಚಾಗಿತ್ತು, ನಗರ ಪ್ರದೇಶಗಳಲ್ಲಿ 25 ದಿನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳ ಅಂತರದಲ್ಲಿ ರೀಫಿಲ್ ಬುಕ್ಕಿಂಗ್‌ಗೆ ಅವಕಾಶ ಇತ್ತು. ಆದರೆ ಈಗ ದೇಶದ LPG ಪೂರೈಕೆ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ:
ಹೊಸ ನಿಯಮದಿಂದ ಅನುಕೂಲ
ಈ ಬದಲಾವಣೆಯಿಂದ ಗ್ರಾಮೀಣ ಪ್ರದೇಶದ LPG ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುವ ನಿರೀಕ್ಷೆಯಿದೆ. ಈ ಹಿಂದೆ 45 ದಿನಗಳ ಅಂತರ ಕಾಯಬೇಕಾಗಿದ್ದ ಗ್ರಾಹಕರು ಇನ್ನು ಮುಂದೆ 25 ದಿನಗಳ ಬಳಿಕವೇ ಮುಂದಿನ ಸಿಲಿಂಡರ್ ರೀಫಿಲ್ ಬುಕ್ ಮಾಡಬಹುದಾಗಿದೆ.
ಈ ಹೊಸ ನಿಯಮದಿಂದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಿದ್ದು, ಗ್ರಾಹಕರು ಇನ್ಮುಂದೆ 25 ದಿನಗಳ ಬಳಿಕ ಮುಂದಿನ ಸಿಲಿಂಡರ್ ರೀಫಿಲ್ ಬುಕ್ ಮಾಡಬಹುದಾಗಿದೆ.



