ಹಬ್ಬದ ದಿನವೇ ಮನೆಗೆ ಪುಟ್ಟ ಗಣಪನ ಆಗಮನ: ಧ್ರುವ ಸರ್ಜಾ ಮನೆಯಲ್ಲಿ ಕಳೆಕಟ್ಟಿದ ಸಂಭ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಯಾಂಡಲ್‌ವುಡ್‌ ಆಕ್ಷನ್‌ ಪ್ರಿನ್ಸ್‌ ಮನೆಯಲ್ಲಿ ಹಬ್ಬದ ದಿನ ಮತ್ತಷ್ಟು ಖುಷಿ ಹೆಚ್ಚಿದೆ. ವಿಶೇಷ ದಿನವೇ ಮನೆಗೆ ಪುಟ್ಟ ಆಗಮನವಾಗುತ್ತಿದ್ದು, ಕುಟುಂಬಸ್ಥರ ಸಂತೋಷ ಮುಗಿಲು ಮುಟ್ಟಿದೆ. ಇಂದು ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗೆ ಗಂಡು ಮಗು ಜನಿಸಿದೆ. ಬೆಂಗಳೂರಿನ ಬಸವನಗುಡಿಯ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿನ ಜನನವಾಗಿದೆ.

ಮೊನ್ನೆಯಷ್ಟೇ ಪ್ರೇರಣಾ ಸೀಮಂತ ಕಾರ್ಯಕ್ರಮ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಈ ಸ್ಟಾರ್‌ ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ. ಈ ವಿಚಾರ ಧ್ರುವ ಅಭಿಮಾನಿಗಳಿಗೆ ಡಬಲ್‌ ಧಮಾಕಾವಾಗಿದ್ದು, ತಾಯಿ-ಮಗು ಆರೋಗ್ಯವಾಗಿರಲೆಂದು ಶುಭ ಹಾರೈಕೆಗಖನ್ನು ತಿಳಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!