June 16, 2026
Tuesday, June 16, 2026
spot_img

ಸ್ಯಾಂಡಲ್‌ವುಡ್ ನಟರಾದ ವಿಜಯ್ ರಾಘವೇಂದ್ರ, ಶ್ರೀಮುರಳಿ ತಾಯಿ ಜಯಮ್ಮ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ ಅವರ ಧರ್ಮಪತ್ನಿ ಹಾಗೂ ಸ್ಯಾಂಡಲ್‌ವುಡ್ ಸ್ಟಾರ್ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ತಾಯಿ ಜಯಮ್ಮ ಅವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಎದುರಿಸುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಇವರ ಅಗಲಿಕೆಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

ಸ್ಟಾರ್ ಕುಟುಂಬದ ಯಶಸ್ಸಿನ ಹಿಂದಿದ್ದ ಶಕ್ತಿ

ಜಯಮ್ಮ ಅವರು ಕೇವಲ ಗೃಹಿಣಿಯಾಗಿರದೆ, ಇಡೀ ಕುಟುಂಬದ ಯಶಸ್ಸಿನ ಹಿಂದಿದ್ದ ನೈತಿಕ ಶಕ್ತಿಯಾಗಿದ್ದರು. ಪತಿ ಚಿನ್ನೇಗೌಡರು ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಳ್ಳಲು ಮತ್ತು ಇಬ್ಬರು ಪುತ್ರರು ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಬೆಳೆಯಲು ಇವರ ಪ್ರೋತ್ಸಾಹ ಅಪಾರ. ತೆರೆಯ ಮರೆಯಲ್ಲೇ ಇದ್ದು ಇಡೀ ಕುಟುಂಬವನ್ನು ಮುನ್ನಡೆಸಿದ ಹೆಗ್ಗಳಿಕೆ ಇವರದ್ದಾಗಿದೆ.

ತಾಯಿಯ ಆಶೀರ್ವಾದದಲ್ಲಿ ಬೆಳೆದ ಪುತ್ರರು

ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ ‘ಚಿನ್ನಾರಿ ಮುತ್ತ’ ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಹೆಮ್ಮೆ ವಿಜಯ್ ರಾಘವೇಂದ್ರ ಅವರದ್ದು. ನಂತರ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಸ್ಯಾಂಡಲ್‌ವುಡ್‌ನ ಪ್ರಮುಖ ನಟರಾಗಿ, ರಿಯಾಲಿಟಿ ಶೋಗಳ ನೆಚ್ಚಿನ ಜಡ್ಜ್ ಆಗಿ ಗುರುತಿಸಿಕೊಂಡಿದ್ದಾರೆ. ಮತ್ತೊಬ್ಬ ಪುತ್ರ ಶ್ರೀಮುರಳಿ ‘ರೋರಿಂಗ್ ಸ್ಟಾರ್’ ಆಗಿ ಮಿಂಚುತ್ತಿದ್ದಾರೆ. ಇಬ್ಬರು ಯಶಸ್ವಿ ಪುತ್ರರನ್ನು ಚಿತ್ರರಂಗಕ್ಕೆ ನೀಡಿದ ಜಯಮ್ಮ ಅವರ ನಿಧನ ಸ್ಯಾಂಡಲ್‌ವುಡ್‌ಗೆ ದೊಡ್ಡ ನಷ್ಟವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !