Thursday, September 21, 2023

Latest Posts

”ಇದು ನನ್ನ ಕೊನೆಯ ಸೀಸನ್”: ಟೆನಿಸ್‌ಗೆ ಸಾನಿಯಾ ಮಿರ್ಜಾ ವಿದಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನ ಮೊದಲ ಸುತ್ತಿನ ಸೋಲಿನ ಬಳಿಕ ಸಾನಿಯಾ ಈ ಮಾಹಿತಿ ನೀಡಿದ್ದು, ಇದು ನನ್ನ ಕೊನೆಯ ಸೀಸನ್ ಎಂದು ನಿರ್ಧರಿಸಿದ್ದೇನೆ ಎಂದಿದ್ದಾರೆ.

ಮೊದಲ ಸುತ್ತಿನಲ್ಲಿ ಸಾನಿಯಾ ಮತ್ತು ಅವರ ಉಕ್ರೇನಿಯನ್ ಜೊತೆಗಾರ್ತಿ ನಾಡಿಯಾ ಕಿಚ್ನೋಕ್ ಸೋಲು ಎದುರಿಸಿದ್ದಾರೆ. ಸ್ಲೋವೇನಿಯಾದ ತಮಾರಾ ಜಿಡಾನ್ಸೆಕ್ ಮತ್ತು ಕಾಜಾ ಜುವಾನ್ ಅವರನ್ನು 4-6,6-7ಒಂದು ಗಂಟೆ 37 ನಿಮಿಷಗಳಲ್ಲಿ ಸೋಲಿಸಿದರು. ಆದರೆ ಸಾನಿಯಾ ಇದೀಗ ಈ ಗ್ರಾನ್‌ಸ್ಲಾಮ್‌ನ ಮಿಶ್ರ ಡಬಲ್ಸ್‌ನಲ್ಲಿ ಅಮೆರಿಕದ ರಾಜೀವ್ ರಾಮ್ ಅವರೊಂದಿಗೆ ಭಾಗವಹಿಸಲಿದ್ದಾರೆ.

ಸುಮಾರು ಒಂದು ವಾರದಿಂದ ಆಡುತ್ತಿದ್ದೇನೆ, ನಾನು ಇಡೀ ಋತುವಿನಲ್ಲಿ ಆಡಲು ಸಾಧ್ಯವಾಗುತ್ತದೆಯೋ ತಿಳಿದಿಲ್ಲ. ಆದರೆ ಆಡಲು ಇಷ್ಟಪಡುತ್ತೇನೆ. ಇದೇ ನನ್ನ ಲಾಸ್ಟ್ ಸೀಸನ್ ಎಂದು ಸಾನಿಯಾ ಹೇಳಿದ್ದಾರೆ.

ಸಾನಿಯಾ ಭಾರತದ ಯಶಸ್ವೀ ಆಟಗಾರ್ತಿ. ತಮ್ಮ ವೃತ್ತಿ ಜೀವನದಲ್ಲಿ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗಳಿಸಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಮೂರು ಪ್ರಶಸ್ತಿ, ಮಿಶ್ರ ಡಬಲ್ಸ್‌ನಲ್ಲಿ ಮೂರು ಪ್ರಶಸ್ತಿ ಪಡೆದಿದ್ದಾರೆ. 2013 ರಲ್ಲಿ ಸಾನಿಯಾ ಸಿಂಗಲ್ಸ್ ಆಡುವುದರಿಂದ ಹಿಂದೆ ಸರಿದಿದ್ದಾರೆ. ಅಂದಿನಿಂದ ಡಬಲ್ಸ್‌ನಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದರು. 2018 ರಲ್ಲಿ ಸಾನಿಯಾಗೆ ಮಗು ಜನಿಸಿದ್ದು, ಎರಡು ವರ್ಷ ಕೋರ್ಟ್‌ನಿಂದ ದೂರ ಇದ್ದರು. ಮಗು ಆದ ನಂತರ ಆಟಕ್ಕಾಗಿ 26 ಕೆ.ಜಿ ತೂಕ ಇಳಿಸಿಕೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!