May 28, 2026
Thursday, May 28, 2026
spot_img

ಸಂಜಯ್ ಕಪೂರ್ ಆಸ್ತಿ ವಿವಾದ: ಬ್ಯಾಂಕ್ ಖಾತೆ, ಕ್ರಿಪ್ಟೋಕರೆನ್ಸಿ ಫ್ರೀಜ್ ಮಾಡಿದ ದೆಹಲಿ ಹೈಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಂಡನ್‌ನಲ್ಲಿ ನಿಧನರಾದ ಉದ್ಯಮಿ ಸಂಜಯ್ ಕಪೂರ್ ಅವರ ಸಾವಿರಾರು ಕೋಟಿ ರೂಪಾಯಿ ಆಸ್ತಿಗೆ ವಿಚಾರಕ್ಕೆ ಸಂಬಂಧಿಸಿ ದೆಹಲಿ ಹೈಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಬ್ಯಾಂಕ್ ಖಾತೆಗಳು ಮತ್ತು ಕ್ರಿಪ್ಟೋಕರೆನ್ಸಿ ಹೂಡಿಕೆಗಳು ಸಂರಕ್ಷಿಸಲು ಆದೇಶಿಸಿದೆ.

ಕಳೆದ ವರ್ಷ ಜೂನ್‌ನಲ್ಲಿ ಲಂಡನ್‌ನಲ್ಲಿ ಸಂಜಯ್ ಕಪೂರ್ ನಿಧನರಾಗಿದ್ದರು. ಇದರ ಬೆನ್ನಲ್ಲೇ ಸುಮಾರು 30,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ವಿಚಾರವಾಗಿ ಮೂರನೇ ಪತ್ನಿ ಪ್ರಿಯಾ ಸಚ್‌ದೇವ ಕಪೂರ್ ಮತ್ತು ಎರಡನೇ ಪತ್ನಿ ನಟಿ ಕರಿಷ್ಮಾ ಕಪೂರ್ ಅವರ ಮಕ್ಕಳಾದ ಕಿಯಾನ್ ಕಪೂರ್ ಮತ್ತು ಸಮೈರಾ ಕಪೂರ್ ನಡುವೆ ವೈಮನಸ್ಸು ಮೂಡಿತ್ತು. ಹೀಗಾಗಿ ಕೋರ್ಟ್ ಈ ನಿರ್ಧಾರ ಕೈಗೊಂಡಿದೆ.

ಕರಿಷ್ಮಾ ಕಪೂರ್ ಮಕ್ಕಳಾದ ಕಿಯಾನ್ ಮತ್ತು ಸಮೈರಾ ಕೋರ್ಟ್ ನಲ್ಲಿ ಪ್ರಿಯಾ ಕಪೂರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಸಂಜಯ್ ಕಪೂರ್ ಹೆಸರಿನಲ್ಲಿ ನಕಲಿ ವಿಲ್, ಆಸ್ತಿ ವಿವರಗಳನ್ನು ನೀಡುವಾಗ ಅಪೂರ್ಣ ಮಾಹಿತಿ ನೀಡಿದ್ದಾರೆ. ಸಂಜಯ್ ಅವರ ಬೆಲೆಬಾಳುವ ಪೋಲೋ ಕುದುರೆಗಳು, ಬ್ರಾಂಡೆಡ್ ಐಷಾರಾಮಿ ಕೈಗಡಿಯಾರಗಳ ವಿವರವನ್ನು ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ದೂರಿದ್ದಾರೆ.

ಈ ಅನುಮಾನಗಳನ್ನು ಪರಿಗಣಿಸಿದ ದೆಹಲಿ ಹೈಕೋರ್ಟ್, ಪ್ರಿಯಾ ಕಪೂರ್ ಯಾವುದೇ ಆಸ್ತಿಗಳನ್ನು ವರ್ಗಾಯಿಸದಂತೆ ನಿರ್ಬಂಧಿಸಿದೆ. ಈ ಪ್ರಕರಣವು ಇತ್ಯರ್ಥವಾಗುವವರೆಗೆ ಎಲ್ಲಾ ಆಸ್ತಿಗಳನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಹೇಳಿದೆ. ಜೊತೆಗೆ ವಿಲ್‌ನ ಸತ್ಯಾಸತ್ಯತೆಯ ಬಗ್ಗೆ ಇರುವ ಸಂಶಯಗಳನ್ನು ನಿವಾರಿಸುವ ತಿಳಿಸಿದೆ.

ಜೊತೆಗೆ ಮಕ್ಕಳ ಹಿತದೃಷ್ಟಿಯಿಂದ ನ್ಯಾಯಾಲಯವು ಒಂದು ವಿನಾಯಿತಿಯನ್ನು ನೀಡಿದ್ದು, ಮಕ್ಕಳಿಗೆ ನೀಡಬೇಕಾದ ಆರ್ಥಿಕ ಜವಾಬ್ದಾರಿಗಳನ್ನು ಪೂರೈಸಲು ಮಾತ್ರ ಬ್ಯಾಂಕ್ ಖಾತೆಗಳಿಂದ ಹಣವನ್ನು ಹಿಂಪಡೆಯಲು ಅನುಮತಿ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !