October 11, 2026
Sunday, October 11, 2026
spot_img

ಕೆಎಸ್‍ಇಬಿ ಸಿಬ್ಬಂದಿಯೊಂದಿಗೆ ಸತೀಶನ್ ಸಖತ್ ಡ್ಯಾನ್ಸ್: ತನ್ನದೇ ವಿಡಿಯೋ ನೋಡಿ ಬೆಚ್ಚಿಬಿದ್ದ ಕೇರಳ ಸಿಎಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆಎಸ್‍ಇಬಿ ಸಿಬ್ಬಂದಿಯೊಂದಿಗೆ ಸತೀಶನ್ ಅವರು ಡ್ಯಾನ್ಸ್ ಮಾಡುತ್ತಿರುವಂತೆ AI ಮೂಲಕ ಸೃಷ್ಟಿಸಲಾಗಿರುವ ಈ ವಿಡಿಯೋ ಕೋಟ್ಯಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಜೊತೆಗೆ ಖುದ್ದು ಸತೀಶನ್ ಅವರೇ ಇದನ್ನು ಕಂಡು ಬೆರಗಾಗಿದ್ದಾರೆ.

ಕೊಚ್ಚಿಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಈ ವಿಡಿಯೋ ಬಗ್ಗೆ ಪ್ರಸ್ತಾಪಿಸಿದ ಸತೀಶನ್, ತಮ್ಮನ್ನು ಡ್ಯಾನ್ಸ್ ಮಾಡುತ್ತಿರುವಂತೆ AI ಮೂಲಕ ತೋರಿಸಿರುವ ಈ ವಿಡಿಯೋವನ್ನು ನೋಡಿ ಅಚ್ಚರಿ ಹಾಗೂ ಆಘಾತಕ್ಕೊಳಗಾಗಿದ್ದಾಗಿ ಹೇಳಿದರು. ಜೊತೆಗೆ ಈ ವಿಡಿಯೋದಲ್ಲಿ ತಾವು ನಟ ಮೋಹನ್‌ಲಾಲ್ ಹಾಗೂ ತಮಿಳುನಾಡು ಮುಖ್ಯಮಂತ್ರಿ, ಸ್ನೇಹಿತ ವಿಜಯ್ ಅವರಿಗಿಂತಲೂ ಉತ್ತಮವಾಗಿ ಡ್ಯಾನ್ಸ್ ಮಾಡುತ್ತಿದ್ದೇನೆ ಎಂದು ನಗೆಯಾಡಿದರು.

ಇದೇ ವೇಳೆ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬೆಳವಣಿಗೆಯಿಂದ ಎದುರಾಗುತ್ತಿರುವ ಹೊಸ ಸವಾಲುಗಳ ಬಗ್ಗೆಯೂ ಸತೀಶನ್ ಮಾತನಾಡಿದರು. AI ಬಳಸಿ ಸಂಗೀತ, ಚಿತ್ರಗಳು ಮತ್ತು ವಿಡಿಯೋಗಳನ್ನು ಸೃಷ್ಟಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಡೀಪ್‌ಫೇಕ್ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಇಂತಹ ಬೆಳವಣಿಗೆಗಳಿಗೆ ಅನುಗುಣವಾಗಿ ಕಾನೂನುಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಅವರು ಇದೇ ಸಂದರ್ಭ ಅಭಿಪ್ರಾಯಪಟ್ಟರು.

Must Read