June 30, 2026
Tuesday, June 30, 2026
spot_img

ಇತಿಹಾಸ ಸೃಷ್ಟಿಸಿದ ಸಾತ್ವಿಕ್‌-ಚಿರಾಗ್ ಜೋಡಿ: ಸಿಂಗಾಪುರ ಓಪನ್‌ ನಲ್ಲಿ ಗೆದ್ದು ಬೀಗಿದ ಭಾರತದ ಡಬಲ್ಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಿಂಗಾಪುರ ಓಪನ್ ಸೂಪರ್ 750 ರಲ್ಲಿ ಭಾರತದ ಬ್ಯಾಡ್ಮಿಂಟನ್ ಪುರುಷರ ಜೋಡಿ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಇತಿಹಾಸ ಸೃಷ್ಟಿಸಿದ್ದಾರೆ.

ಈ ಜೋಡಿ ಇಂಡೋನೇಷ್ಯಾದ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ಶೋಹಿಬುಲ್ ಫಿಕ್ರಿ ಜೋಡಿ ವಿರುದ್ಧ ಫೈನಲ್ ನಲ್ಲಿ ಗೆಲುವು ಸಾಧಿಸುವ ಮೂಲಕ ಸಿಂಗಾಪುರ ಓಪನ್ ಸೂಪರ್ 750 ರಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಫೈನಲ್‌ನಲ್ಲಿ ಜಿದ್ದಾಜಿದ್ದಿ ಮ್ಯಾಚ್

ಫೈನಲ್‌ನಲ್ಲಿ ಜಿದ್ದಾಜಿದ್ದಿಯಲ್ಲಿ ಇಂಡೋನೇಷ್ಯಾದ ಜೋಡಿ ಆರಂಭದಲ್ಲಿ ಅದ್ಭುತ ಆಟವಾಡಿ 21-18 ರಿಂದ ಮುನ್ನಡೆ ಸಾಧಿಸಿತು. ಬಳಿಕ ಭಾರತೀಯ ಜೋಡಿ ಎರಡನೇ ಸೆಟ್ ಅನ್ನು 21-15 ರಿಂದ ಗೆದ್ದು ಪುನರಾಗಮನ ಮಾಡಿತು. ಮೂರನೇ ಸೆಟ್‌ ರೋಚಕತೆಯಿಂದ ಕೂಡಿತ್ತು. ಇದರಲ್ಲಿ ಸಾತ್ವಿಕ್ ಮತ್ತು ಚಿರಾಗ್ ಆರಂಭದಿಂದಲೂ ಪ್ರಾಬಲ್ಯ ಸಾಧಿಸಿ, 21-16 ರಿಂದ ಗೆಲುವು ದಾಖಲಿಸಿದರು. ಈ ಮೂಲಕ ಅದ್ಭುತ ಸಾಧನೆ ಮಾಡುವ ಮೂಲಕ ಇತಿಹಾಸದ ಪುಟಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.

ಟೂರ್ನಿ ಯಲ್ಲಿ ಉತ್ತಮ ಪ್ರದರ್ಶನ

ಸಾತ್ವಿಕ್‌ ಮತ್ತು ಚಿರಾಗ್ ಶೆಟ್ಟಿ ಜೋಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಂಗಾಪುರ ಓಪನ್‌ಗೆ ಸ್ವಲ್ಪ ಮೊದಲು, ಥೈಲ್ಯಾಂಡ್ ಓಪನ್‌ನ ಫೈನಲ್ ತಲುಪಿದರು. ಆದರೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾದರು. ಆದರೆ ಸಿಂಗಾಪುರ ಓಪನ್‌ನ ಆರಂಭದಿಂದಲೂ ಈ ಜೋಡಿ ಅತ್ಯುತ್ತಮ ಫಾರ್ಮ್‌ನಲ್ಲಿತ್ತು. ತೈಪೆ ಜೋಡಿ ಲೀ ಜೆ-ಹುಯಿ ಮತ್ತು ಯಾಂಗ್ ಪೊ-ಹ್ಸುವಾನ್ ಅವರನ್ನು ಸೋಲಿಸುವ ಮೂಲಕ ಅವರು ಮೊದಲು 16 ರ ಸುತ್ತಿನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ನಂತರ ಜಪಾನಿನ ಜೋಡಿಯನ್ನು ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು. ಮಲೇಷ್ಯಾದ ಜೋಡಿ ಗೂ ಸೋಲುಣಿಸಿ ಸೆಮಿಫೈನಲ್‌ಗೆ ಮುನ್ನಡೆದರು. ಸೆಮಿಫೈನಲ್‌ನಲ್ಲಿ ಅವರು ದಕ್ಷಿಣ ಕೊರಿಯಾದ ಜೋಡಿವಿರುದ್ಧ ಗೆದ್ದು ಫೈನಲ್‌ಗೆ ಎಂಟ್ರಿ ಕೊಟ್ಟರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !