ಸೌದಿಯ ಟಿವಿ ವಾಹಿನಿಯಲ್ಲಿ ಬಿಡೆನ್ ಕುರಿತು ಮಿಮಿಕ್ರಿ!

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಎಂಬಿಸಿ ಗ್ರೂಪ್ ಅನ್ನೋದು ಸೌದಿ ಅರೇಬಿಯಾದ ಆಡಳಿತಗಾರರ ಒಡೆತನದಲ್ಲಿರುವ ಟಿವಿ ವಾಹಿನಿ. ಇದರಲ್ಲಿ ಕಮಲಾ ಹ್ಯಾರಿಸ್ ಹಾಗೂ ಜೊ ಬಿಡೆನ್ ಥರ ವೇಷ ಧರಿಸಿ ಬಂದಿರುವ ರೂಪದರ್ಶಿಗಳು ಬಿಡೆನ್ ವರ್ತನೆಯನ್ನು ಗೇಳಿ ಮಾಡಿರುವ ದೃಶ್ಯ ತುಣುಕು ಇದೀಗ ಟ್ವಿಟ್ಟರಿನಲ್ಲಿ ಭಾರಿ ವ್ಯೂ ಪಡೆದುಕೊಳ್ಳುತ್ತಿದೆ.

ಅಮೆರಿಕ ಅಧ್ಯಕ್ಷ ಜೊ ಬಿಡೆನ್ ಇತ್ತೀಚಿನ ದಿನಗಳಲ್ಲಿ ಯಾವುದೋ ವಿಷಯ ಶುರು ಮಾಡಿ ಇನ್ನೇನಕ್ಕೋ ಹೊರಳಿಕೊಳ್ಳುವುದು, ಏನೋ ಹೇಳಲು ಹೋಗಿ ಅದನ್ನು ಪೂರ್ಣಗೊಳಿಸಲಾಗದೇ ಒದ್ದಾಡುವುದು ಇಂಥವೆಲ್ಲ ವರದಿಯಾಗುತ್ತಲೇ ಇವೆ. ಇದನ್ನೇ ಅನುಕರಿಸಿರುವ ಸೌದಿ ವಾಹಿನಿಯ ರೂಪದರ್ಶಿಗಳು, ರಷ್ಯದ ಬಗ್ಗೆ ಮಾತನಾಡಹೊರಟ ಬಿಡೆನ್ ವಿಷಯವನ್ನೇ ಮರೆತು ಇನ್ನೇನೋ ಬಡಬಡಿಸುವುದನ್ನು, ಪಕ್ಕದಲ್ಲಿರುವ ಕಮಲಾ ಹ್ಯಾರಿಸ್ ಅಧ್ಯಕ್ಷರನ್ನು ಸಂಭಾಳಿಸುವ ಯತ್ನದಲ್ಲಿರುವುದನ್ನು, ಬಿಡೆನ್ ಮಾತಿನ ಮಧ್ಯೆ ನಿದ್ದೆ ಹೋಗುವುದನ್ನೆಲ್ಲ ತೋರಿಸುತ್ತ ಗೇಲಿ ಮಾಡಿದೆ.

ಇತ್ತೀಚೆಗೆ ಸೌದಿ ಯುವರಾಜ ಬಿಡೆನ್ ಜತೆ ದೂರವಾಣಿ ಸಂಭಾಷಣೆ ನಡೆಸುವುದಕ್ಕೆ ನಿರ್ಲಕ್ಷ್ಯ ತೋರಿಸಿದ್ದು ವರದಿಯಾಗಿತ್ತು ಎಂಬುದಿಲ್ಲಿ ಗಮನಾರ್ಹ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!