Sunday, November 27, 2022

Latest Posts

ಸಾವರ್ಕರರನ್ನು ದ್ವೇಷಿಸುವವರ ಮುಖಕ್ಕೆ ಬಡಿಯುತ್ತಿದೆ ಮಹಾತ್ಮ ಗಾಂಧಿ ಕುರಿತ ಈ ದಾಖಲೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾರತ ಜೋಡೊ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಅವರು ಶನಿವಾರ ತಮ್ಮ ಪತ್ರಿಕಾಗೋಷ್ಟಿಯಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡುತ್ತ ಸಾವರ್ಕರ್ ವಿರುದ್ಧದ ಕೊಂಕನ್ನು ಪುನರುಚ್ಚರಿಸಿದರು. “ನನಗೆ ಗೊತ್ತಿರುವ ಹಾಗೆ ಸಾವರ್ಕರ್ ಬ್ರಿಟಿಷರಿಂದ ಸ್ಟೈಪಂಡ್ ತೆಗೆದುಕೊಂಡಿದ್ದರು” ಎನ್ನುತ್ತ ಅವರ ಸ್ವಾತಂತ್ರ್ಯ ಹೋರಾಟವನ್ನು ನಿರಾಕರಿಸಿದರು.

ಇದರ ಬೆನ್ನಲ್ಲೇ ಬಿಜೆಪಿಯ ಮಾಹಿತಿ ವಿಭಾಗ ಮುಖ್ಯಸ್ಥ ಅಮಿತ್ ಮಾಳವೀಯ ತಮ್ಮ ಟ್ವೀಟಿನಲ್ಲಿ ಕೆಲವು ದಾಖಲೆಗಳನ್ನು ಲಗತ್ತಿಸಿ ರಾಹುಲ್ ಗಾಂಧಿಗೆ ಪ್ರತಿಪ್ರಶ್ನೆ ಕೇಳಿದರು. ಅವರು ಲಗತ್ತಿಸಿರುವ ಸರ್ಕಾರಿ ದಾಖಲೆಗಳು ಗಮನಾರ್ಹ. ಈ ದಾಖಲೆಗಳು ಹೇಳುತ್ತಿರುವುದೇನೆಂದರೆ, 1932ರಲ್ಲಿ ಬೋಸ್ ಅವರಿಗೆ ಮಾಸಿಕ 32 ರುಪಾಯಿ ಜೈಲಿನಿಂದ ನೀಡಲಾಗಿತ್ತು ಹಾಗೂ ಮಹಾತ್ಮ ಗಾಂಧಿ ಮತ್ತು ಪಟೇಲರಿಗೆ ಮಾಸಿಕ 100 ರುಪಾಯಿಗಳನ್ನು ನೀಡಲಾಗಿತ್ತು. ಅಪರಾಧವಿನ್ನೂ ದೃಢವಾಗಿರದ ವಿಚಾರಣಾಧೀನ ಕೈದಿಗಳಿಗೆ ಆ ಮೊತ್ತವನ್ನು ಕೊಡಬೇಕಿರುವುದು ಕಾಯಿದೆಯಾಗಿತ್ತು. ಹಾಗಾದರೆ ಇವರೆಲ್ಲರನ್ನೂ ಬ್ರಿಟಿಷರ ಏಜೆಂಟ್ ಎನ್ನಲಾಗುತ್ತದೆಯೇ ಎಂಬುದು ಬಿಜೆಪಿ ವಕ್ತಾರರ ಪ್ರಶ್ನೆ.

 

ಪ್ರಶ್ನೆ ಕೇಳಿದ್ದು ಯಾರೇ ಆದರೂ ಅವರು ನೀಡುತ್ತಿರುವ ದಾಖಲೆಗಳ ಅಧಿಕೃತತೆ ತಳ್ಳಿ ಹಾಕುವಂತಿಲ್ಲ. ಅದು ನ್ಯಾಷನಲ್ ಆರ್ಕೈವ್ ಎಂಬ ಸರ್ಕಾರದ ತಾಣದಲ್ಲೇ ಲಭ್ಯವಿದೆ.

ಮಹಾತ್ಮ ಗಾಂಧಿಯವರಿಗೆ 1930ರ ಸಂದರ್ಭದಲ್ಲಿ ಪಾವತಿಯಾಗಿದ್ದ ಮಾಸಿಕ 100 ರುಪಾಯಿಗಳ ದಾಖಲೆಯನ್ನು ಕೆಲ ದಿನಗಳ ಹಿಂದೆ ಖ್ಯಾತ ಇತಿಹಾಸಕಾರ ವಿಕ್ರಂ ಸಂಪತ್ ಅವರೂ ಅಧಿಕೃತ ಮೂಲದಿಂದಲೇ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದರು.

 

ಸಾವರ್ಕರ್ ಅವರನ್ನು ಬ್ರಿಟಿಷರ ಸಹಭಾಗಿ ಎಂದು ಕುಹಕವಾಡುತ್ತಿದ್ದವರಿಗೆಲ್ಲ ಈ ದಾಖಲೆಗಳು ಇನ್ನು ಮುಂದೆ ಪ್ರತಿಬಾರಿ ಎದುರಾಗಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!