ತುಮಕೂರು ವಿವಿಯಲ್ಲಿ ಸಾವರ್ಕರ್‌ ಅಧ್ಯಯನ ಪೀಠ

ಹೊಸದಿಗಂತ ಡಿಜಿಟಲ್‌ ಡೆಸ್ಕ್, ತುಮಕೂರು
ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಶುಕ್ರವಾರ ಒಪ್ಪಿಗೆ ನೀಡಲಾಗಿದೆ.
ಸಾವರ್ಕರ್‌ ಅಧ್ಯಯನ ಪೀಠ ಸ್ಥಾಪನೆ ಸಂಬಂಧ ಸಿಂಡಿಕೇಟ್‌ ಸದಸ್ಯ ಟಿ.ಡಿ.ವಿನಯ್‌ ಅವರು ಸಲ್ಲಿಸಿದ್ದ ಪ್ರಸ್ತಾವನೆಗೆ ಸಭೆ ಒಮ್ಮತದ ಒಪ್ಪಿಗೆ ಸೂಚಿಸಿದೆ. ವಿನಯ್ ಅವರು ಪೀಠಕ್ಕೆ 1 ಲಕ್ಷ ರು. ದೇಣಿಗೆ ಸಹ ನೀಡುವುದಾಗಿ ಹೇಳಿದ್ದಾರೆ. ಪೀಠ ಸ್ಥಾಪನೆಗೆ ಒಪ್ಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.
ವಿವಿಯಲ್ಲಿ ಈಗಾಗಲೇ 14 ಅಧ್ಯ ಯನ ಪೀಠಗಳಿವೆ. ಈಗ ಸಾಮರ್ಕರ್‌ ಅಧ್ಯಯನ ಪೀಠದಿಂದ ಮತ್ತೊಂದು ಪೀಠ ಸ್ಥಾಪನೆಯಾದಂತಾಗಲಿದೆ. ಸಾವರ್ಕರ್ ಪೀಠ ಸ್ಥಾಪನೆಗೆ ಅಗತ್ಯವಿರುವ ಕರಡು ಪರಿನಿಯಮಗಳನ್ನು ಕೂಡ ಈಗಾಗಲೇ ಸಿದ್ಧಪಡಿಸಲಾಗಿದ್ದು ಪೀಠ ಕಾರ್ಯಾಚರಿಸಲು ಅಗತ್ಯವಿರು ವ 25 ಲಕ್ಷ ರು.ಗಳನ್ನು ದಾನಿಗಳಿಂದ ಪಡೆಯಲು ಸದಸ್ಯರು ನಿರ್ಧರಿಸಿದ್ದಾರೆ.

ಪೀಠ ರಚನೆಯ ಉದ್ದೇಶಗಳೇನು?

  • ರಾಜಕೀಯ, ಐತಿಹಾಸಿಕ ಮತ್ತು ಸಾಹಿತ್ಯಿಕ ಕಾರ್ಯಗಳಿಗೆ ಸಂಬಂಧಿಸಿದ ಅಗತ್ಯ ಅಧ್ಯಯನವನ್ನು ನಡೆಸಲು ಹಾಗೂ ಮತ್ತು ʼರಾಷ್ಟ್ರೀಯತೆಯʼ ವಿವಿಧ ರೂಪಗಳನ್ನು ಪ್ರಕಟಪಡಿಸಲು ಹೆಚ್ಚಿನ ಸಂಶೋಧನೆ ಕೈಗೊಳ್ಳಲು ಉದ್ದೇಶಿಸಲಾಗಿದೆ.
  • ಸ್ಥಳೀಯ ಸಿದ್ಧಾಂತದ ಆಧಾರದ ಮೇಲೆ ಸಂಶೋಧನಾ ಚಟುವಟಿಕೆಗಳನ್ನು ನಡೆಸುವುದು. 
  • ರಾಷ್ಟ್ರೀಯ ಸಿದ್ಧಾಂತಗಳ ಕುರಿತಾಗಿ ಸೈದ್ಧಾಂತಿಕ ಮತ್ತು ತುಲನಾತ್ಮಕ ಅಧ್ಯಯನ.
  • ರಾಷ್ಟ್ರ ನಿರ್ಮಾಣದ ಸೈದ್ಧಾಂತಿಕ ದೃಷ್ಟಿಕೋನʼ ವಿಷಯದ ಮೇಲೆ ಸರ್ಟಿಫಿಕೇಟ್‌ ಕೋರ್ಸ್.
  • ಸಾವರ್ಕರ್‌ ಅವರ ಜೀವನ ಮತ್ತು ಕೊಡುಗೆಗಳ ಕುರಿತಾಗಿ ವಿಮರ್ಶಾತ್ಮಕ ಮೌಲ್ಯಮಾಪನ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!