July 25, 2026
Saturday, July 25, 2026
spot_img

ಪಿಎಸ್‌ಎಲ್ ಗೆ ಗುಡ್ ಬೈ ಹೇಳಿ ಐಪಿಎಲ್ ಗೆ ಎಂಟ್ರಿ: ಕೆಕೆಆರ್ ಆಟಗಾರ ಎರಡು ವರ್ಷ ಬ್ಯಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ ಝಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಝರಬಾನಿ ಗೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಶಾಕ್ ನೀಡಿದ್ದು, ಎರಡು ವರ್ಷಗಳ ಕಾಲ ಪಿಎಸ್‌ಎಲ್‌ನಲ್ಲಿ ಆಡದಂತೆ ನಿಷೇಧ ಹೇರಿದೆ.

ಪಾಕಿಸ್ತಾನ್ ಸೂಪರ್ ಲೀಗ್ ಆಡಲು ಮುಝರಬಾನಿ ಇಸ್ಲಾಮಾಬಾದ್ ಯುನೈಟೆಡ್ ತಂಡದ ಜೊತೆ 1.1 ಕೋಟಿ ರೂ. ಮೊತ್ತದ ಒಪ್ಪಂದ ಮಾಡಿಕೊಂಡಿದ್ದರು. ಆದರೆ ದಿಢೀರ್ ಲೀಗ್ ಆರಂಭಕ್ಕೆ ಕೆಲವೇ ದಿನ ಇರುವಾಗಲೇ ಪಿಎಸ್‌ಎಲ್ ಗೆ ಗುಡ್ ಬೈ ಹೇಳಿ ಐಪಿಎಲ್ ನತ್ತ ಮುಖಮಾಡಿದ್ದರು.

ಈ ಹಿನ್ನೆಲೆ ಮುಝರಬಾನಿ ವಿರುದ್ಧ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಶಿಸ್ತು ಕ್ರಮ ಕೈಗೊಂಡಿದ್ದು, ಮುಂದಿನ 2 ವರ್ಷ ಪಾಕಿಸ್ತಾನ್ ಸೂಪರ್ ಲೀಗ್ ನಿಂದ ಗೇಟ್ ಪಾಸ್ ನೀಡಿದೆ.

ಕೊಲ್ಕತ್ತಾ ನೈಟ್ ರೈಡರ್ಸ್ ಪರ ಈವರೆಗೆ 2 ಪಂದ್ಯಗಳನ್ನಾಡಿದ್ದ ಮುಝರಬಾನಿ 4 ವಿಕೆಟ್ ಕಬಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !