Monday, October 2, 2023

Latest Posts

SCHOKING NEWS |ಸೆರೆ ಹಿಡಿದ ಹಾವೇ ಕಚ್ಚಿ ಉರಗತಜ್ಞ ಸ್ನೇಕ್ ನರೇಶ್ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್

ತಾನು ಸೆರೆ ಹಿಡಿದ ಹಾವು ಕಚ್ಚಿ ಉರಗತಜ್ಞ ಸ್ನೇಕ್ ನರೇಶ್ ಸಾವನ್ನಪ್ಪಿರುವ ಘಟನೆ  ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್​ನಲ್ಲಿ ನಡೆದಿದೆ.

ಸ್ನೇಕ್ ನರೇಶ್ ಅವರ ಬೈಕ್ ಡಿಕ್ಕಿಯಲ್ಲಿ ಎರಡು ಹಾವು ಪತ್ತೆಯಾಗಿದ್ದರೆ, ಕಾರಿನಲ್ಲಿದ್ದ ಬ್ಯಾಗ್​ಗಳಲ್ಲಿ ಹಾವುಗಳ ರಾಶಿಯೇ ಪತ್ತೆಯಾಗಿವೆ.

ಹಾವುಗಳನ್ನು ಸೆರೆ ಹಿಡಿದು ಕಾರಿನಲ್ಲಿ ಶೇಖರಣೆ ಮಾಡುತ್ತಿದ್ದ ನರೇಶ್, 15 ದಿನಕ್ಕೊಮ್ಮೆ ಚಾರ್ಮಾಡಿಗೆ ಹೋಗಿ ಹಾವುಗಳನ್ನು ಬಿಟ್ಟು ಬರುತ್ತಿದ್ದರು.

2013ರಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸ್ನೇಕ್ ನರೇಶ್ ಎಂದೇ ಖ್ಯಾತಿ ಪಡೆದಿದ್ದ ನರೇಶ್, ಶಾಲಾ ಮಕ್ಕಳಿಗೆ ಹಾವುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!