VIRAL VIDEO| ವಿಜ್ಞಾನಿಗಳ ಕಣ್ಣಿಗೆ ಬಿತ್ತು 50 ಸಾವಿರ ವರ್ಷಗಳಷ್ಟು ಹಳೆಯ ಕೊಳಲು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಾಚೀನ ಕಾಲದ ಅನೇಕ ಸಂಗೀತ ವಾದ್ಯಗಳ ಬಗ್ಗೆ ಕೇಳಿದ್ದೇವೆ…ಇದೀಗ ವಿಜ್ಞಾನಿಗಳು ವಿಶ್ವದ ಅತ್ಯಂತ ಹಳೆಯ ಸಂಗೀತ ಉಪಕರಣವನ್ನು ಕಂಡುಹಿಡಿದಿದ್ದಾರೆ. ಸ್ಲೊವೇನಿಯಾದ ಡಿವ್ಜೆ ಬೇಬ್ ಗುಹೆಯಲ್ಲಿ ಐವತ್ತು ಸಾವಿರ ವರ್ಷಗಳ ಹಿಂದಿನ ಕೊಳಲೊಂದು ಪತ್ತೆಯಾಗಿದೆ.

ಪುರಾತತ್ತ್ವಜ್ಞರು ಸ್ಲೊವೇನಿಯಾದ ಡಿವ್ಜೆ ಬೇಬ್ ಗುಹೆಯಲ್ಲಿ ಕರಡಿ ಮೂಳೆಗಳಿಂದ ತಯಾರಿಸಿದ ಐತಿಹಾಸಿಕ ಸಂಗೀತ ಉಪಕರಣವನ್ನು ಕಂಡುಹಿಡಿದಿದ್ದಾರೆ. ಇದನ್ನು ಈಗಲೂ ಸಹ ನುಡಿಸಬಹುದು. ಇದು ಸುಮಾರು 50,000 ವರ್ಷಗಳಷ್ಟು ಹಳೆಯದಾದ ನಿಯಾಂಡರ್ತಲ್ ಕೊಳಲು ಎಂದು ಹೇಳಲಾಗಿದೆ. ಇದ್ರಿಜ್ಕಾ ನದಿಯ ಬಳಿಯ ಗುಹೆಯಲ್ಲಿ ಇವಾನ್ ಟರ್ಕ್ ಎಂಬ ವಿಜ್ಞಾನಿಗಳ ಗುಂಪು ಉತ್ಖನನ ಕೈಗೊಂಡಿದ್ದರು ಆಗ ಈ ಮೂಳೆ ಕೊಳಲು ಉತ್ಖನನದಲ್ಲಿ ಪತ್ತೆಯಾಗಿದೆ. ಸಾವಿರಾರು ವರ್ಷಗಳಷ್ಟು ಹಳೆಯದಾಗಿದ್ದರೂ, ಈ ಸಂಗೀತ ಉಪಕರಣವು ಇನ್ನೂ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಈ ಕೊಳಲನ್ನು ಸ್ಲೊವೇನಿಯಾದ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!