ಸೆ. 17ರಿಂದ ಹುಬ್ಬಳ್ಳಿಯಲ್ಲಿ ಮಾಧ್ವತತ್ವಜ್ಞಾನ ಸಮ್ಮೇಳನ

ಹೊಸದಿಗಂತ ವರದಿ  ಹುಬ್ಬಳ್ಳಿ:

ಬೆಂಗಳೂರ ಹಾಗೂ ಹುಬ್ಬಳ್ಳಿಯ ಅಖಿಲ ಭಾರತ ಮಾಧ್ವ ಮಹಾಮಹಾಮಂಡಳ 29ನೇ ಅಖಿಲ ಭಾರತ ಮಾಧ್ವತತ್ವಜ್ಞಾನ ಸಮ್ಮೇಳನ ಸೆ. 17,18 ರಂದು ಎರಡು ದಿನಗಳ ಕಾಲ ಇಲ್ಲಿಯ ಕೇಶ್ವಾಪುರದ ಕುಸುಗಲ್ ರಸ್ತೆ ಶ್ರೀನಿವಾಸ ಗಾರ್ಡನ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಪಾದ ಸಿಂಗನಮಲ್ಲಿ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡಪಿಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಕಳೆದ 28 ವರ್ಷದಿಂದ ಅಖಿಲ ಭಾರತ ಮಾಧ್ವತತ್ವಜ್ಞಾನ ಸಮ್ಮೇಳನ ಮಾಡಿಲಾಗುತ್ತಿದೆ. ಕೊರೋನಾದಿಂದ ಎರಡು ವರ್ಷ ಮಾಡಲು ಆಗಿರಲಿಲ್ಲ ಎಂದರು.

ಎರಡು ದಿನದ ಸಮ್ಮೇಳನದಲ್ಲಿ ವಿದ್ವತ್ ಗೋಷ್ಠಿಗಳು, ಸಂಗೀತ, ದಾಸವಾಣಿ, ಭಜನೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಾಗಿದೆ. ವಿವಿಧ ಭಾಗದ ೧೯ ಮಾಧ್ವ ಯತಿಗಳು, 300-400 ವಿದ್ವಾಂಸರು ಭಾಗವಹಿಸಲಿದ್ದಾರೆ. ವಿವಿಧ ಜಿಲ್ಲೆಯ ೫ ಸಾವಿರ ಭಕ್ತರು ಭಾಗವಹಿಸುತ್ತಿದ್ದಾರೆ ಎಂದರು.

ಸೆ. 17 ರಂದು ಬೆಳಿಗ್ಗೆ 7 ಗಂಟೆಗೆ ಕುಸುಗಲ್ ರಸ್ತೆಯ ಮುಧುರಾ ಕಾಲೋನಿಯಿಂದ ಶ್ರೀನಿವಾಸ ಗಾರ್ಡನ್ ವರೆಗೆ ಶೋಭಾಯಾತ್ರೆ ನಡೆಯಲಿದೆ. ಉಡಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಮಂತ್ರಲಯ ರಾಘವೇಂದ್ರ ಸ್ವಾಮೀಜಿ, ಸುಭಧ್ರೇಂದ್ರತೀರ್ಥ ಸ್ವಾಮೀಜಿ, ಲೇಖಕ ಚಕ್ರವರ್ತಿ ಸೂಲಿಬೆಲಿ ಭಾಗವಹಿಸುವರು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!