May 21, 2026
Thursday, May 21, 2026
spot_img

ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: ರಿಸಲ್ಟ್ ಹೀಗೆ ಚೆಕ್ ಮಾಡಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶವನ್ನು ಇಂದು ಶಿಕ್ಷಣ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ. ರಾಜ್ಯದ ಒಟ್ಟು ಕ್ರೋಢೀಕೃತ ಫಲಿತಾಂಶವು 92.25% ಕ್ಕೆ ತಲುಪಿದೆ. ಕಳೆದ ವರ್ಷದ ಫಲಿತಾಂಶಕ್ಕೆ (85.19%) ಹೋಲಿಸಿದರೆ ಈ ಬಾರಿ 7.06% ರಷ್ಟು ಗಣನೀಯ ಏರಿಕೆ ಕಂಡುಬಂದಿದೆ.

ವಿದ್ಯಾರ್ಥಿಗಳು ಮತ್ತು ಪೋಷಕರು ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ karresults.nic.in ನಲ್ಲಿ ವೀಕ್ಷಿಸಲು ಅವಕಾಶ ನೀಡಲಾಗಿದೆ. ಈ ವೆಬ್‌ಸೈಟ್‌ಗೆ ಹೋಗಿ, ತಮ್ಮ ನೋಂದಣಿ ಸಂಖ್ಯೆ (Registration Number) ಹಾಗೂ ಅಗತ್ಯವಾದ ಸಂಯೋಜನೆ ವಿವರಗಳನ್ನು ನಮೂದಿಸಿದರೆ ಫಲಿತಾಂಶ ತಕ್ಷಣ ಕಾಣಿಸುತ್ತದೆ.

ಕರ್ನಾಟಕ ಒನ್ ಆ್ಯಪ್ ಮೂಲಕ ಫಲಿತಾಂಶ

ಅದೇ ರೀತಿ ಕರ್ನಾಟಕ ಒನ್ ಆ್ಯಪ್ ಮೂಲಕವೂ ಫಲಿತಾಂಶವನ್ನು ನೋಡಬಹುದು. ಈ ಆ್ಯಪ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡಿರುವ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಬೇಡಿಕೆಯ ಮಾಹಿತಿಯನ್ನು ನಮೂದಿಸಿ ಫಲಿತಾಂಶ ಪರಿಶೀಲಿಸಬಹುದು.

ಈ ಬಾರಿಪಿಯುಸಿ ಎರಡನೇ ಪರೀಕ್ಷೆ-2ಯಲ್ಲಿ ಕಲಾ, ವಾಣಿಜ್ಯ, ವಿಜ್ಞಾನದಲ್ಲಿ 80,535 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 36,764 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಬಾಲಕಿಯರೇ ಟಾಪ್

ಈ ಬಾರಿಯೂ ಫಲಿತಾಂಶದಲ್ಲಿ ಬಾಲಕರಿಗಿಂತ ಬಾಲಕಿಯರು ಮುನ್ನಡೆ ಸಾಧಿಸಿದ್ದಾರೆ.ಬಾಲಕಿಯರು 93.62% ಉತ್ತೀರ್ಣರಾಗಿದ್ದರೆ, ಬಾಲಕರು 90.52% ಸಾಧನೆ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !