ಸಮುದ್ರ ಗಡಿಗಳಲ್ಲಿ ಭದ್ರತೆ ಇನ್ನಷ್ಟು ಬಿಗಿ: ಡ್ರ್ಯಾಗನ್ ಉಪಟಳಕ್ಕೆ ಲಗಾಮು ಹಾಕಲು ಫಿಲಿಪ್ಪೀನ್ಸ್ ಸರ್ಕಾರ ಸಿದ್ಧತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಮುದ್ರ ಮಾರ್ಗದ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲು ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನ್ಯಾಂಡ್ ಮಾರ್ಕಸ್ ಜೂನಿಯರ್ ಆದೇಶ ನೀಡಿದ್ದು, ಭೂದಾಹದ ಚೀನಾಗೆ ಪುಟ್ಟ ರಾಷ್ಟ್ರ ಸೆಡ್ಡುಹೊಡೆದಿದೆ.

ದಕ್ಷಿಣ ಚೀನಾ ಸಮುದ್ರ ವಲಯದಲ್ಲಿ ನೌಕಾಪಡೆ ಸಂಘರ್ಷ, ಅತಿಕ್ರಮಣ ಪ್ರಯತ್ನಗಳು ಹೆಚ್ಚುತ್ತಿರುವ ಬೆನ್ನಿಗೇ ಅಲರ್ಟ್ ಆಗಿರುವ ಫಿಲಿಪ್ಪೀನ್ಸ್ ಸರ್ಕಾರ, ಚೀನಾ ಹೆಸರನ್ನು ಉಲ್ಲೇಖಿಸದೆಯೇ ಈ ಆದೇಶ ಹೊರಡಿಸಿದೆ. ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿ ಬಹುತೇಕ ತನ್ನ ಗಡಿಗೆ ಸೇರಿದೆ ಎಂದು ಚೀನಾ ಪ್ರತಿಪಾದಿಸುತ್ತಲೆ ಇದೆ. ಆದರೆ ಫಿಲಿಪ್ಪೀನ್ಸ್, ವಿಯೆಟ್ನಾಂ, ಇಂಡೊನೇಷ್ಯಾ, ಮಲೇಷ್ಯಾ ಈ ವಾದವನ್ನು ತಳ್ಳಿಹಾಕಿವೆ. ಈ ನಡುವೆ ದೇಶದ ಗಡಿ ಭಾಗದಲ್ಲಿನ ಚೀನಾದ ಚಟುವಟಿಕೆಗಳು, ದೇಶದ ಶಾಂತಿಗೆ ಧಕ್ಕೆ ತರುವ ಪ್ರಯತ್ನಗಳು ಹೆಚ್ಚುತ್ತಲೇ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಫಿಲಿಪ್ಪೀನ್ಸ್ ಸರ್ಕಾರ ಭದ್ರತೆ ಇನ್ನಷ್ಟು ಬಿಗಿಗೊಳಿಸಲು ಸಜ್ಜಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!