ಮೇಷ
ಕೆಲ ದಿನಗಳ ಅಡೆತಡೆ ಬಳಿಕ ಇಂದು ದಿನವು ಸುಗಮವಾಗಿ ಸಾಗಲಿದೆ. ಕೆಲಸ ನಿರ್ವಿಘ್ನವಾಗಿ ಪೂರ್ಣ. ನಿಮ್ಮ ಸುತ್ತಲಿನ ಪರಿಸರ ಶಾಂತಿಯುತ.
ವೃಷಭ
ವೃತ್ತಿಯಲ್ಲಿ ಸಫಲತೆ. ಹಿರಿಯರು ನಿಮ್ಮ ಕಾರ್ಯ ಮೆಚ್ಚಿಕೊಳ್ಳುವರು. ಮಾನಸಿಕ ತುಮುಲ ಇಂದು ನಿವಾರಣೆ ಕಾಣಲಿದೆ. ನಿರಾಳತೆ.
ಮಿಥುನ
ಮಾನಸಿಕ ಬೇಗುದಿ. ಅದಕ್ಕೆ ನಿರ್ದಿಷ್ಟ ಕಾರಣವೆಂಬುದಿಲ್ಲ. ಎಲ್ಲರೂ ನಿಮಗೆ ವಿರೋಧಿಗಳು ಎಂಬಂಥ ಭಾವ. ಮನೋನಿಗ್ರಹ ಇರಲಿ.
ಕಟಕ
ಲಾಭ-ನಷ್ಟ ಎರಡೂ ಉಂಟಾಗಲಿದೆ. ಕೆಲ ವಿಷಯ ಉದ್ವಿಗ್ನತೆ ಸೃಷ್ಟಿ. ಆಪ್ತರ ಅಸಹಕಾರ. ಉಷ್ಣ ಸಂಬಂಧ ಬಾಧೆ ಉಂಟಾದೀತು. ಸಿಂಹ
ನೀವು ಕೈಗೊಳ್ಳುವ ಕ್ರಮ ಉತ್ತಮ ಫಲ ನೀಡುವುದು. ವೃತ್ತಿಯಲ್ಲಿ ತೃಪ್ತಿ. ಕೌಟುಂಬಿಕ ಭಿನ್ನಮತ ನಿವಾರಣೆ. ಮೆದು ಮಾತು ಒಳಿತು. ಕನ್ಯಾ
ವೃತ್ತಿಯೊತ್ತಡ ಹೆಚ್ಚು. ಕೆಲವರ ಅಸಹಕಾರ. ಮನೆಯಲ್ಲಿ ಸಣ್ಣ ವಿಷಯಕ್ಕೆ ವಾಗ್ವಾದ ನಡೆದೀತು. ಸಹನೆಯಿಂದ ನಡಕೊಳ್ಳಿ. ಧ್ಯಾನ ಸಹಕಾರಿ.
ತುಲಾ
ನಿಮ್ಮ ಪಾಲಿಗೆ ಅತ್ಯಂತ ಯಶಸ್ವೀ ದಿನ. ಆಪ್ತರಿಂದ ಅಚ್ಚರಿಯ ವಿಷಯ ಕೇಳುವಿರಿ. ಹಳೆಯ ಹೂಡಿಕೆ ಈಗ ಲಾಭ ತರಬಹುದು.
ವೃಶ್ಚಿಕ
ಸಹನೆ ಅತಿ ಮುಖ್ಯ. ನಿಮಗೆ ಪಥ್ಯವಾಗದ ಬೆಳವಣಿಗೆ ನಡೆದೀತು. ವಿರೋಽಸದೆ ಹೊಂದಿಕೊಂಡು ಸಾಗಿ. ಆಪ್ತರ ಅಸಹಕಾರ.
ಧನು
ನಿಮ್ಮ ಕುರಿತಾದ ತಪ್ಪುಕಲ್ಪನೆ ನೀಗಲು ಆದ್ಯತೆ ಕೊಡಿ. ಇಲ್ಲವಾದರೆ ಅದು ಸಂಬಂಧದ ಮೇಲೆ ಪರಿಣಾಮ ಬೀರಬಹುದು. ಟೀಕೆ ಕಡೆಗಣಿಸಿ.
ಮಕರ
ವೃತ್ತಿಯಲ್ಲಿ ಅಡ್ಡಿ. ವೃತ್ತಿಗೆ ಸಂಬಂಽಸಿ ಪ್ರಮುಖ ನಿರ್ಧಾರ ತಾಳದಿರಿ. ಆತ್ಮೀಯರ ಜತೆ ಮನ ಬಿಚ್ಚಿ ಮಾತಾಡಿ. ಮುಚ್ಚುಮರೆ ಬೇಡ. ಕುಂಭ
ಹೊಸ ವ್ಯವಹಾರ ಆರಂಭಕ್ಕೆ ಸಕಾಲ. ಎಲ್ಲ ನಿಮಗೆ ಪೂರಕವಾಗಿ ಸಾಗುವುದು. ಅಜೀರ್ಣ ಸಮಸ್ಯೆ. ಮಿತಾಹಾರ ಒಳ್ಳೆಯದು.
ಮೀನ
ಸಕಾಲದಲ್ಲಿ ಕಾರ್ಯ ಮುಗಿಸಿ. ಮುಂದೆ ಹಾಕುತ್ತಾ ಹೋಗಬೇಡಿ. ಅನಿರೀಕ್ಷಿತ ಧನಗಳಿಕೆ. ಬಂಧು ಜತೆಗಿನ ಮನಸ್ತಾಪ ಅಂತ್ಯ.



