Monday, October 2, 2023

Latest Posts

ಸೆನ್ಸೆಕ್ಸ್‌ 250 ಪಾಯಿಂಟ್‌ ಏರಿಕೆ : ಇಂದಿನ ಷೇರುಪೇಟೆ ಹೇಗಿದೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಿಶ್ರ ಜಾಗತಿಕ ಸೂಚನೆಗಳ ನಡುವೆ ಭಾರತೀಯ ಷೇರು ಮಾರುಕಟ್ಟೆಗಳು ಸಕಾರಾತ್ಮಕವಾಗಿ ತೆರೆದಿದ್ದು ಸೆನ್ಸೆಕ್ಸ್ 282.28 ಪಾಯಿಂಟ್ ಅಥವಾ 0.53 ಶೇಕಡಾ ಏರಿಕೆಯಾಗಿ 53416.63 ಕ್ಕೆ ತಲುಪಿದೆ ಮತ್ತು ನಿಫ್ಟಿ 61.30 ಪಾಯಿಂಟ್ ಅಥವಾ 0.39 ರಷ್ಟು ಏರಿಕೆಯಾಗಿ 15872.20 ಕ್ಕೆ ತಲುಪಿದೆ. ಸುಮಾರು 1105 ಷೇರುಗಳು ಮುನ್ನಡೆ ಸಾಧಿಸಿದ್ದರೆ 527 ಷೇರುಗಳು ಹಿನ್ನಡೆ ಅನುಭವಿಸಿದ್ದು 101 ಷೇರುಗಳು ಯಥಾಸ್ಥಿತಿಯಲ್ಲಿವೆ.

ಟಾಪ್‌ ಗೇನರ್ಸ್:‌
ಏಷ್ಯನ್ ಪೇಂಟ್ಸ್, ಎಲ್ & ಟಿ, ಆಕ್ಸಿಸ್ ಬ್ಯಾಂಕ್, ಬಜಾಜ್ ಟ್ವಿನ್ಸ್, ಕೋಟಕ್ ಬ್ಯಾಂಕ್, ಮಾರುತಿ, ಟೆಕ್ ಎಂ, ಎಚ್‌ಯುಎಲ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಸೆನ್ಸೆಕ್ಸ್‌ನಲ್ಲಿ ಮುನ್ನಡೆ ಸಾಧಿಸಿದರೆ, ಬಿಪಿಸಿಎಲ್, ಐಷರ್ ಮೋಟಾರ್ಸ್, ಎಸ್‌ಬಿಐ ಲೈಫ್ ನಿಫ್ಟಿಯಲ್ಲಿ ಅಗ್ರ ಲಾಭ ಪಡೆದಿವೆ.

ಟಾಪ್‌ ಲೂಸರ್ಸ್:‌
ONGC, ಹಿಂಡಾಲ್ಕೊ, ಟಾಟಾ ಸ್ಟೀಲ್, JSW ಸ್ಟೀಲ್, ಕೋಲ್ ಇಂಡಿಯಾ, ನೆಸ್ಲೆ, ಪವರ್‌ಗ್ರಿಡ್ ಮತ್ತು NTPC ಎರಡೂ ಮಾನದಂಡಗಳಲ್ಲಿ ಟಾಪ್‌ ಲೂಸರ್‌ ಗಳಾಗಿವೆ.

ವಿಸ್ತೃತ ಮಾರುಕಟ್ಟೆಯ ಹೀಗಿದೆ :
ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.4 ರಷ್ಟು ಹೆಚ್ಚಾಗಿದೆ.
ನಿಫ್ಟಿ ಲೋಹಗಳು ಶೇಕಡಾ 1.6 ಕ್ಕಿಂತ ಹೆಚ್ಚು ಕುಸಿದಿವೆ.
ತೈಲ ಮತ್ತು ಅನಿಲ ಸೂಚ್ಯಂಕಗಳು ಕಳಪೆ ಪ್ರದರ್ಶನ ತೋರಿಸಿವೆ.
ರಿಯಾಲ್ಟಿ, ಹಣಕಾಸು, ಆಟೋ ಮತ್ತು ಬ್ಯಾಂಕ್‌ಗಳು ಸಕಾರಾತ್ಮಕವಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!