Sunday, March 26, 2023

Latest Posts

260 ಪಾಯಿಂಟ್‌ ಕುಸಿದ ಸೆನ್ಸೆಕ್ಸ್:‌ ಹೀಗಿದೆ ಷೇರುಪೇಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬುಧವಾರ ಭಾರತೀಯ ಷೇರು ಮಾರುಕಟ್ಟೆಗಳು ಕೆಂಬಣ್ಣದಲ್ಲಿ ತೆರೆದಿದ್ದು ಸೆನ್ಸೆಕ್ಸ್ 263.92 ಪಾಯಿಂಟ್ ಅಥವಾ 0.43 ಶೇ. ಕುಸಿದು 60,408.80 ಕ್ಕೆ ತಲುಪಿದೆ ಮತ್ತು ನಿಫ್ಟಿ 67.70 ಪಾಯಿಂಟ್ ಅಥವಾ 0.38 ಶೇ. ಕುಸಿದು 17,759 ಕ್ಕೆ ತಲುಪಿದೆ.

ಸುಮಾರು 689 ಷೇರುಗಳು ಮುನ್ನಡೆ ಸಾಧಿಸಿವೆ, 1196 ಷೇರುಗಳು ಹಿನ್ನಡೆ ಅನುಭವಿಸಿದೆ ಮತ್ತು 93 ಷೇರುಗಳು ಯಥಾಸ್ಥಿತಿಯಲ್ಲಿವೆ.

ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಸೂಚ್ಯಂಕಗಳು ಶೇಕಡಾ 0.3 ರಷ್ಟು ಕುಸಿದಿದ್ದರಿಂದ ವಿಶಾಲ ಮಾರುಕಟ್ಟೆಗಳು ಸಹ ವ್ಯಾಪಾರದಲ್ಲಿ ನಷ್ಟದಲ್ಲಿವೆ.
ನಿಫ್ಟಿ ಮೆಟಲ್ ಸೂಚ್ಯಂಕ ಹೊರತುಪಡಿಸಿ ಉಳಿದೆಲ್ಲ ವಲಯಗಳು ಕೆಂಪು ಸಮುದ್ರದಲ್ಲಿ ಮುಳುಗಿವೆ.

ನಿಫ್ಟಿಯಲ್ಲಿ ಅದಾನಿ ಎಂಟರ್‌ಪ್ರೈಸಸ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ಎಚ್‌ಸಿಎಲ್ ಟೆಕ್ ಮತ್ತು ವಿಪ್ರೋ ಪ್ರಮುಖ ನಷ್ಟವನ್ನು ಅನುಭವಿಸಿದರೆ, ಕೋಲ್ ಇಂಡಿಯಾ, ಬ್ರಿಟಾನಿಯಾ, ಹಿಂಡಾಲ್ಕೊ, ಅಪೊಲೊ ಹಾಸ್ಪಿಟಲ್ಸ್ ಮತ್ತು ಟಾಟಾ ಸ್ಟೀಲ್ ಲಾಭ ಗಳಿಸಿವೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!