Sunday, February 5, 2023

Latest Posts

ಬಿಡುಗಡೆ ಬಳಿಕ ಫ್ರಾನ್ಸ್‌ಗೆ ತೆರಳಿದ ಸೀರಿಯಲ್ ಕಿಲ್ಲರ್ ಚಾರ್ಲ್ಸ್ ಶೋಭರಾಜ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಏಷ್ಯಾದಾದ್ಯಂತ 1970 ರ ದಶಕದಲ್ಲಿ ನಡೆದ ಸರಣಿ ಕೊಲೆಗಳಿಗೆ ಕಾರಣನಾದ ಫ್ರೆಂಚ್ ಮೂಲದ ಸರಣಿ ಕೊಲೆಗಾರ ಚಾರ್ಲ್ಸ್ ಶೋಭರಾಜ್ ನೇಪಾಳದಲ್ಲಿ ಸುಮಾರು 20 ವರ್ಷಗಳ ಜೈಲುವಾಸ ಕೊನೆಗೊಳಿಸಿದ ನಂತರ ಶನಿವಾರ ಫ್ರಾನ್ಸ್‌ಗೆ ತೆರಳಿದ್ದಾನೆ.
78 ವರ್ಷದ ಶೋಭ್‌ರಾಜ್‌ ನನ್ನು ಅನಾರೋಗ್ಯದ ಆಧಾರದ ಮೇಲೆ ಆತನನ್ನು ಬಿಡುಗಡೆ ಮಾಡಿ 15 ದಿನಗಳಲ್ಲಿ ಫ್ರಾನ್ಸ್‌ಗೆ ಗಡೀಪಾರು ಮಾಡುವಂತೆ ನೇಪಾಳದ ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ನೀಡಿತ್ತು.
ಶುಕ್ರವಾರ, ಅವರನ್ನು ಬಿಡುಗಡೆ ಮಾಡಲಾಯಿತು ಮತ್ತು ಅವರನ್ನು ದೋಹಾ ಮೂಲಕ ಪ್ಯಾರಿಸ್‌ಗೆ ಕರೆದೊಯ್ಯಲಾಯಿತು. ದೋಹಾಗೆ ವಿಮಾನದಲ್ಲಿದ್ದಾಗ, ಅವರು ಎಎಫ್‌ಪಿ ಪತ್ರಕರ್ತರೊಬ್ಬರ ಬಳಿ ಮಾತನಾಡುವಾಗ ತಾನು ಅಮಾಯಕ ಎಂದು ಹೇಳಿಕೊಂಡಿರು.
ಶೋಭರಾಜ್‌ ಕುಖ್ಯಾತ ಸೀರಿಯಲ್‌ ಕಿಲ್ಲರ್. ‌ ಆತ ರತ್ನದ ವ್ಯಾಪಾರಿಯಂತೆ ನಟಿಸುತ್ತಾ ಜನರೊಂದಿಗೆ ಸ್ನೇಹ ಬೆಳೆಸುತ್ತಿದ್ದ. ಹೀಗೆ ಸ್ನೇಹಬೆಳೆಸಿದ ಹಿಪ್ಪಿಗಳು, ಪಾಶ್ಚಾತ್ಯ ವರ್ತಕರು, ಮಾದಕವಸ್ತು ಪ್ರೇಮಿಗಳು 1970 ರ ದರಶದಲ್ಲಿ ಶೋಭರಾಜ್‌ ನಿಂದ ಕೊಲೆಯಾಗಿದ್ದರು.
ʼನನಗೆ ಬಹಳಷ್ಟು ಕೆಲಸಗಳಿವೆ. ನಾನು ನೇಪಾಳವೂ ಸೇರಿದಂತೆ ಬಹಳಷ್ಟು ಜನರ ಮೇಲೆ ಮೊಕದ್ದಮೆ ಹೂಡಬೇಕಾಗಿದೆ” ಎಂದು ಶೋಭರಾಜ್ ವಿಮಾನದಲ್ಲಿ ಹೇಳಿದರು. ನನ್ನನ್ನು ಸರಣಿ ಕೊಲೆಗಾರ ಎಂದು ತಪ್ಪಾಗಿ ಬಿಂಬಿಸಲಾಗಿದೆ ಎಂದು ಹೇಳಿದರು.
ಚಾರ್ಲ್ಸ್ ಸೈಗಾನ್‌ನಲ್ಲಿ ಭಾರತೀಯ ತಂದೆ ಮತ್ತು ವಿಯೆಟ್ನಾಂನ ತಾಯಿಗೆ ಜನಿಸಿದರು, ನಂತರ ಅವರು ಫ್ರೆಂಚ್ ಯುವತಿಯನ್ನು ವಿವಾಹವಾದರು. “ಬಿಕಿನಿ ಕಿಲ್ಲರ್” ಎಂದು ಅಡ್ಡಹೆಸರು ಹೊಂದಿರುವ ಶೋಭರಾಜ್ ಅಂತಿಮವಾಗಿ 20 ಕ್ಕೂ ಹೆಚ್ಚು ಕೊಲೆಗಳೊಂದಿಗೆ ಸಂಬಂಧ ಹೊಂದಿದ್ದನು. ಅವರು 1976 ರಲ್ಲಿ ಭಾರತದಲ್ಲಿ ಬಂಧಿಸಲ್ಪಟ್ಟಿದ್ದ. 1986 ರಲ್ಲಿ ಅವರು ಜೈಲು ಸಿಬ್ಬಂದಿಗೆ ಮಾದಕ ದ್ರವ್ಯ ಸೇವಿಸಿ ತಪ್ಪಿಸಿಕೊಂಟಡಿದ್ದ. ಅವರನ್ನು ಗೋವಾದಲ್ಲಿ ಮತ್ತೆ ಸೆರೆಹಿಡಿಯಲಾಯಿತು. ಅಂತಿಮವಾಗಿ ಇಲ್ಲಿ 21 ವರ್ಷಗಳ ಜೈಲಿನಲ್ಲಿ ಕಳೆದರು.
1997 ರಲ್ಲಿ ಬಿಡುಗಡೆಯಾದ ಸೋಭರಾಜ್ ಪ್ಯಾರಿಸ್‌ನಲ್ಲಿ ವಾಸಿಸುತ್ತಿದ್ದ. ಆದರೆ 2003 ರಲ್ಲಿ ನೇಪಾಳಕ್ಕೆ ಮರಳಿದರು. ನೇಪಾಳದ ನ್ಯಾಯಾಲಯವು 1975 ರಲ್ಲಿ ಅಮೆರಿಕ ಪ್ರವಾಸಿ ಕೋನಿ ಜೋ ಬ್ರೋಂಜಿಚ್‌ನನ್ನು ಕೊಂದಿದ್ದಕ್ಕಾಗಿ ಮುಂದಿನ ವರ್ಷ ಸೊಬ್ರಾಜ್‌ಗೆ ಜೀವಾವಧಿ ಶಿಕ್ಷೆಯನ್ನು ನೀಡಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!